*ಗೋವಾ: ನ್ಯಾಷನಲ್ ಪರ್ಪಾರ್ಮಿಂಗ್ ಆರ್ಟ್ಸ್* *ಚಾಂಪಿಯನ್ ಶಿಪ್ 2023*   

0

ಸುಳ್ಯದ ತರುಣ್ಸ್  ಡ್ಯಾನ್ಸ್ ಯೂನಿಟ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಇಂಡಿಯಾ ನ್ಯಾಷನಲ್ ಪರ್ಫಾರ್ಮಿಂಗ್ ಆರ್ಟ್ಸ್ ಚಾಂಪಿಯನ್ ಶಿಪ್ ವತಿಯಿಂದ ಉತ್ತರ ಗೋವಾದ ಸಂತ ಶಿರೋಭಂತ ಅಂಬಿಯೇ ಸರಕಾರಿ ಕಾಲೇಜಿನಲ್ಲಿ ಮೇ.20ರಂದು ನಡೆದ ನ್ಯಾಷನಲ್ ಪರ್ಫಾರ್ಮಿಂಗ್ ಆರ್ಟ್ಸ್ ಚಾಂಪಿಯನ್ ಶಿಪ್ 2023ರ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಳ್ಯದ ತರುಣ್ಸ್ ಡ್ಯಾನ್ಸಿಂಗ್ ಯೂನಿಟ್ ನ ಹಲವು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಂಡು ನೇಪಾಳದ ಕಟ್ಮಂಡುವಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಳ್ಯದ ತರುಣ್ಸ್ ಡ್ಯಾನ್ಸ್ ಯೂನಿಟ್ ವಿದ್ಯಾರ್ಥಿಗಳಾದ ಸೋನ ಅಡ್ಕಾರು, ಸ್ವರ, ಹಾರ್ದಿಕ, ಇಂಚರ ಪಿ.ಆರ್. ಹಂಶಿತ್ ಅಡ್ಕಾರು, ರಿಶಾನ್, ಪ್ರಾಪ್ತ್, ಸಚಿನ್ ಅವರು ಭಾಗವಹಿಸಿ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 22 ತಂಡಗಳು ಈ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

8ರಿಂದ 11 ವರ್ಷದೊಳಗಿನ ಸೋಲೋ ನೃತ್ಯ ಸ್ಪರ್ಧೆಯಲ್ಲಿ ತರುಣ್ಸ್ ಡ್ಯಾನ್ಸ್ ತಂಡದ ಸೋನಾ ಅಡ್ಕಾರು ಅವರು ಸೆಮಿ ಕ್ಲಾಸಿಕಲ್ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಹಾರ್ದಿಕಾ ಅವರು ಪೆಂಟಂಮ್ಟರ್ರಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ, ಪ್ರೀಸ್ಟೈಲ್ ನೃತ್ಯ ಸ್ಪರ್ಧೆಯಲ್ಲಿ ಸ್ವರ ಅವರು ತೃತೀಯ ಪ್ರಶಸ್ತಿ, 14ರಿಂದ 17 ವರ್ಷದೊಳಗಿನ ಇಪಾಪ್ ನೃತ್ಯ ಸ್ಪರ್ಧೆಯಲ್ಲಿ ಇಂಚರ ಪಿ.ಆರ್. ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದೇಶದ ಹಲವು ಭಾಗಗಳಿಂದ 160ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳು ವೈಯಕ್ತಿಕ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಸುಳ್ಯದ ತರುಣ್ಸ್ ಡ್ಯಾನ್ಸ್ ನೃತ್ಯ ತರಬೇತಿ ಕೇಂದ್ರದ ತರುಣ್ ರಾಜ್ ಮಂಗಳೂರು ಅವರು ಈ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದು, ಸೋನಾ ಅಡ್ಕಾರು ಹಾಗೂ ಹಂಶಿತ್ ಅಡ್ಕಾರು ಅವರು ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ದಂಪತಿಯ ಮಕ್ಕಳಾಗಿದ್ದು, ಸೋನಾ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ಹಂಶಿತ್ ಅವರು ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿ.

ಸ್ವರ ಸುಳ್ಯದ ಬೆಟ್ಟಂಪಾಡಿ ಲೋಕನಾಥ್ ಹಾಗೂ ಶ್ರೀಮತಿ ಜಯಶ್ರೀ ದಂಪತಿಯ ಪುತ್ರಿಯಾಗಿದ್ದು, ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ 5ನೇ ತರಗತಿ ವಿದ್ಯಾರ್ಥಿನಿ. ಹಾರ್ದಿಕಾ ಕೇನ್ಯ ಗ್ರಾಮದ ಕೆರೆಕ್ಕೋಡಿ ಕೃಷ್ಣಪ್ಪ ಗೌಡ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಯ ಪುತ್ರಿಯಾಗಿದ್ದು, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ 5ನೇ ತರಗತಿ ವಿದ್ಯಾರ್ಥಿನಿ. ಇಂಚರಾ ಪಿ.ಆರ್. ಆಲೆಟ್ಟಿ ಗ್ರಾಮದ ರಾಜೇಶ್ ಹಾಗೂ ಶ್ರೀಮತಿ ಸವಿತ ದಂಪತಿಯ ಪುತ್ರಿಯಾಗಿದ್ದು, ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ. ಪ್ರಾಪ್ತ್ ಪುತ್ತೂರು ತಾಲೂಕಿನ ಸಂಟ್ಯಾರು ಪ್ರಮೋದ್ ಕುಮಾರ್ ಹಾಗೂ ಶ್ರೀಮತಿ ಕೃಷ್ಣವೇಣಿ ದಂಪತಿಯ ಪುತ್ರನಾಗಿದ್ದು, ಸುಳ್ಯದ ಕೆ.ವಿ.ಜಿ. ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿ.

ರಿಶನ್ ಸುಳ್ಯದ ಬೀರಮಂಗಲದ ರೋನಾಲ್ಡೋ ಡಿಸೋಜ ಹಾಗೂ ಶ್ರೀಮತಿ ಮರಿಯಕ್ರಾಸ್ತ ದಂಪತಿಯ ಪುತ್ರನಾಗಿದ್ದು, ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿ. ಸಚಿನ್ ಮಂಗಳೂರಿನ ಶ್ರೀಮತಿ ಅಮೃತೇಶ್ವರಿ ಅವರ ಪುತ್ರ.

ಈ ಎಲ್ಲಾ ಎಂಟು ಮಂದಿ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯು ನೇಪಾಳದ ಕಟ್ಮಂಡುವಿನಲ್ಲಿ ಜೂ. 25ರಿಂದ 27ರವರೆಗೆ ಜರುಗಲಿದೆ.

LEAVE A REPLY

Please enter your comment!
Please enter your name here