ಮೇ 31ಕ್ಕೆ ಶಾಲೆ ಆರಂಭೋತ್ಸವ

0

ಶಾಲಾ ಮಕ್ಕಳಿಗೆ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಮೇ 31ರಂದು ನಡೆಯುವ ಶಾಲಾ ಆರಂಭೋತ್ಸವದ ಮೂಲಕ ಆರಂಭವಾಗಲಿವೆ. ಆದರೆ ಶಿಕ್ಷಕರು ಮೇ 29ರಿಂದಲೇ ಶಾಲೆಗೆ ತೆರಳಿ ಶೈಕ್ಷಣಿಕ ವರ್ಷದ ಆರಂಭಕ್ಕೆ ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮಕ್ಕಳಿಗೂ ಮೇ 29ರಿಂದಲೇ ತರಗತಿಗಳನ್ನು ಆರಂಭಿಸಲು ಈ ಹಿಂದೆ ಇಲಾಖೆಯಿಂದ ತಿಳಿಸಲಾಗಿತ್ತು. ಈಗ ಎರಡು ದಿನಗಳ ಕಾಲ ಶೈಕ್ಷಣಿಕ ವರ್ಷದ ಆರಂಭಕ್ಕೆ ಅಗತ್ಯ ಸಿದ್ಧತೆ, ಶಾಲಾವರಣದ ಸ್ವಚ್ಛತೆ, ಮೂಲಸೌಕರ್ಯಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಅವಕಾಶ ನೀಡಲಾಗಿದೆ. ಮೇ 31ರಿಂದ ತರಗತಿಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.