ಅರಂತೋಡು: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

0

ಬದ್ರಿಯಾ ಜುಮಾ ಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್(ರಿ) ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಪವಿತ್ರ ಹಜ್ ಯಾತ್ರೆಗೆಂದು ಮಕ್ಕಾಕ್ಕೆ ತೆರಳಲಿರುವ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ನಿವ್ರತ್ತ ಉಪನ್ಯಾಸಕ ಎ.ಅಬ್ದುಲ್ಲ ಮಾಸ್ತರ್ ಹಾಗೂ ಅರಂತೋಡು ಜಮಾಅತ್ ನ ಮಾಜಿ ಕಾರ್ಯದರ್ಶಿ ಎ.ಇಸ್ಮಾಯಿಲ್ ಅಡಿಮರಡ್ಕ ಇವರಿಗೆ ಬೀಳ್ಕೊಡುವ ಸಮಾರಂಭವು ಅರಂತೋಡು ನುಸ್ರತುಲ್ ಇಸ್ಲಾಂ ಸಭಾಂಗಣದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾವನ್ನು ಸ್ಥಳೀಯ ಖತೀಬರಾದ ಬಹು | ಅಲ್ ಹಾಜ್ ಇಸಾಕ್ ಬಾಖವಿ ನೆರವೇರಿಸಿ, ಹಜ್ ಎಂದರೆ ಕರ್ಮಗಳನ್ನು ಪೂರೈಸುವುದು, ದೇವರ ಅತಿಥಿಯಾಗಿ ತೆರಳುವ ಎಲ್ಲಾ ಹಾಜಿಗಳಿಗೆ ಕ್ಷಮೆ ಇರಬೇಕು ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಬೇಕು ಎಂದರು.


ಸಹಾಯಕ ಅಧ್ಯಾಪಕ ಶಾಫಿ ಮುಸ್ಲಿಯಾರ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ದುಬೈ ಸಮಿತಿಯ ಗೌರವಾಧ್ಯಕ್ಷ ಬದುರುದ್ದೀನ್ ಪಟೇಲ್ ಹಜ್ ಯಾತ್ರಿಗಳಿಗೆ ಶುಭ ಹಾರೈಸಿದರು. ಯಾತ್ರಿಗಳಾದ ಅಬ್ದುಲ್ಲ ಮಾಸ್ತರ್, ಇಸ್ಮಾಯಿಲ್ ಅಡಿಮರಡ್ಕ ಮಾತನಾಡಿ ಯಾತ್ರೆ ಯಶಸ್ವಿಗೆ ಪ್ರಾರ್ಥಿಸಬೇಕೆಂದರು.


ವೇದಿಕೆಯಲ್ಲಿ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಸುಳ್ಯ ತಾಲೂಕು ಜಮ್ಯೀಯುತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಆಶಿಕ್ ಅರಂತೋಡು, ಹಾಜಿ ಎಸ್.ಇ. ಮಹಮ್ಮದ್, ಸಂಶುದ್ದೀನ್ ಪೆಲ್ತಡ್ಕ, ಎ. ಹನೀಫ್, ಅಬ್ದುಲ್ ಖಾದರ್ ಪಟೇಲ್, ಕೆ.ಎಂ ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್, ಹಾಜಿ ಅಝರುದ್ದೀನ್ ಮುಜೀಬ್, ಜುಬೈರ್ ಎಸ್.ಇ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್ ಸ್ವಾಗತಿಸಿದರು. ಎಸೋಸಿಯೇಶನ್ ಕಾರ್ಯದರ್ಶಿ ಪಸೀಲು ವಂದಿಸಿದರು.