
ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ನೇತೃತ್ವದಲ್ಲಿ ಮಡಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಮಾಡಪ್ಪಾಡಿ ಹಿ.ಪ್ರಾ. ಶಾಲೆಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮೇ.20ರಂದು ನಡೆಯಿತು.
ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರ ದೇವ ಮಡಪ್ಪಾಡಿ ಶಿಬಿರ ಉದ್ಘಾಟಿಸಿದರು.















ಬೇಸಿಗೆ ಶಿಬಿರದಲ್ಲಿ ಸುಗಮಗಾರರಾಗಿ ರಂಜಿತ್ ಶಿರಡ್ಕ ಶಿಕ್ಷಕರು ಮಾಡಪ್ಪಾಡಿ, ಪ್ರಜ್ವಲ್ ಸಿ ಹೆಚ್ ಒ ಮಡಪ್ಪಾಡಿ, ತಾರಾನಾಥ ಅಂಬೆಕಲ್ಲು ಪೋಸ್ಟ್ ಮಾಸ್ಟರ್ ಮಡಪ್ಪಾಡಿ, ಲಲಿತ ನಡುಬೆಟ್ಟು ಭಾಗವಹಿಸಿದರು.
ಶಿಬಿರದಲ್ಲಿ ಮಕ್ಕಳಿಗೆ ಕಥೆ ರಚನೆ, ಬರೆಯುವ ಹವ್ಯಾಸ, ಅಂಚೆ ಕಾರ್ಡ್, ನಾಯಕತ್ವ, ಶುಚಿತ್ವ, ಜನಪದ, ಗ್ರಾಮೀಣ ಕ್ರೀಡೆಗಳು, ಗಣಿತ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳು, ಅಂಚೆ ಕಚೇರಿ ಭೇಟಿ, ಕ್ರಾಫ್ಟ್, ಇನ್ನಿತರ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಯಿತು.
27 ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.
ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ನವ್ಯ ಸಹಕರಿಸಿದರು.









