ಕುಡೆಕಲ್ಲು ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ- ತಂತ್ರಿವರ್ಯರಿಂದ ವೈದಿಕ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಶ್ರೀ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ರಾತ್ರಿ ವೈದಿಕ ಕಾರ್ಯಕ್ರಮ ಜರುಗಿತು.


ಪೂರ್ವಾಹ್ನ ಉಗ್ರಾಣ ತುಂಬುವುದರೊಂದಿಗೆ ಪ್ರಾರಂಭಗೊಂಡು ಸಂಜೆ ತಂತ್ರಿಗಳ ಆಗಮನವಾಗಿ ದೇವತಾ ಪ್ರಾರ್ಥನೆ, ಆಚಾರ್ಯವರಣ,ಪುಣ್ಯಾಹವಾಚನ,ಸುದರ್ಶನ ಹೋಮ,ಪ್ರೇತವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಚಾಟನೆ, ಉಚ್ಚಾಟನೆ ಬಲಿ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ವೈದಿಕ ಕಾರ್ಯಕ್ರಮ ನಡೆಯಿತು.


ಬಳಿಕ ಭಕ್ತಾದಿಗಳಿಗೆ
ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು. ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.