ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಸರಕಾರ ರಚನೆ

0

ಸರ್ಕಾರಿ ಪ್ರೌಢಶಾಲೆ ದುಗ್ಗಲಡ್ಕ ಇಲ್ಲಿ
2023-24 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ಮೂಲಕ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ 10 ನೇ ತರಗತಿಯ ಜೋಯಿಷ್ಠನ್ ಕ್ರಾಸ್ತ, ಉಪ ಮುಖ್ಯ ಮಂತ್ರಿಯಾಗಿ 9 ನೇ ತರಗತಿಯ ಗ್ರೀಷ್ಮ , ವಿರೋಧ ಪಕ್ಷದ ನಾಯಕಿಯಾಗಿ 10 ನೇ ತರಗತಿಯ ತೇಜಸ್ವಿನಿ ವಿರೋಧ ಪಕ್ಷದ ಉಪ ನಾಯಕಿಯಾಗಿ 9 ನೇ ತರಗತಿಯ ಆಯಿಷತ್ ಶಮ್ನ ಆಯ್ಕೆಯಾದರು.

ಸಭಾಪತಿಯಾಗಿ 10 ನೇ ತರಗತಿಯ ಲಕ್ಷ್ಮೀನಾರಾಯಣ , ಶಿಕ್ಷಣ ಮಂತ್ರಿಯಾಗಿ 10 ನೇ ತರಗತಿಯ ಗೌತಮಿ , ಆರೋಗ್ಯ ಮಂತ್ರಿಯಾಗಿ 10 ನೇ ತರಗತಿಯ ಧನ್ಯಶ್ರೀ, ವಾರ್ತಾ ಮಂತ್ರಿಯಾಗಿ 10 ನೇ ತರಗತಿಯ ಹರ್ಷಿತಾ, ಕೃಷಿ ಮಂತ್ರಿಯಾಗಿ 9 ನೇ ತರಗತಿಯ ಯಶ್ವಂತ್, ಕ್ರೀಡಾ ಮಂತ್ರಿಯಾಗಿ 9 ನೇ ತರಗತಿಯ ಹರಿಪ್ರಸಾದ್ , ನೀರಾವರಿ ಮಂತ್ರಿಯಾಗಿ 8 ನೇ ತರಗತಿಯ ನಿಕ್ಷಿತ್ , ಸಾಂಸ್ಕೃತಿಕ ಮಂತ್ರಿಯಾಗಿ 10 ನೇ ತರಗತಿಯ ದಿವ್ಯಶ್ರೀ , ಆಹಾರ ಮಂತ್ರಿಯಾಗಿ 9 ನೇ ತರಗತಿಯ ಫಾತಿಮತ್ ಜೆಝಿಲ , ಸ್ವಚ್ಛತಾ ಮಂತ್ರಿಯಾಗಿ 10 ನೇ ತರಗತಿಯ ಅನನ್ಯ , ಕವನ ಮತ್ತು ಶ್ರೇಯ , ಶಿಸ್ತು ಮಂತ್ರಿಯಾಗಿ 10 ನೇ ತರಗತಿಯ ದೀಕ್ಷಾ ,

ಗೃಹ ಮಂತ್ರಿಯಾಗಿ 10 ನೇ ತರಗತಿಯ ಮಹಮ್ಮದ್ ಬಾಸಿಲ್ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕರು ಪ್ರಮಾಣ ವಚನ ಬೋಧಿಸಿದರು. ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿ ಸರಕಾರ ರಚನೆಯ ಎಲ್ಲ ಕ್ರಮಗಳನ್ನು ನಡೆಸಿಕೊಟ್ಟರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.