ಕೇರ್ಪಡ : ತೀರ್ಥ ಕೆರೆ, ತೀರ್ಥಬಾವಿ ಅಭಿವೃದ್ಧಿಗೆ ಧನ ಸಹಾಯ

0

ಎರಡು ವರ್ಷ ಗಳ ಹಿಂದೆ ಕೇರ್ಪಡ ಮಹೀಷಮರ್ದಿನಿ ಭಜನಾ ಮಂಡಳಿ ಯ ವತಿಯಿಂದ ಹಿರಿಯರಾದ ಸುಂದರ ಗೌಡ ಆರೆಂಬಿ, ನಾರಾಯಣ ಎಂಜೀರು, ಬಾಲಕೃಷ್ಣ ಗೌಡ ಕೆ. ಮತ್ತು ಬಾಲಕೃಷ್ಣ ಕೆ. ನೂಜಾಡಿ ಇವರ ನೇತೃತ್ವದಲ್ಲಿ ದೇವಸ್ಥಾನದ ಕಲ್ಯಾಣಿ (ತೀರ್ಥಕೆರೆ) ತೀರ್ಥಬಾವಿ ಅಭಿವೃದ್ಧಿ ಸಲುವಾಗಿ ಮನೆ ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ ಸಂಗ್ರಹವಾದ ರೂ.44343 ಹಣವನ್ನು ಚೆಕ್ ರೂಪದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ ಇವರಿಗೆ ಇಂದು ದೇವಸ್ಥಾನದಲ್ಲಿ ಹಸ್ತಾಂತರಲಾಯಿತು.