ಜೂ.25 : ದರ್ಖಾಸ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯು ಜೂ.25 ರಂದು ನಡೆಯಲಿದೆ.


ಸಂಘದ ಕಚೇರಿಯಲ್ಲಿ ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಚುನಾವಣೆ ನಡೆಯಲಿದೆ.


ಸಾಮಾನ್ಯ ಸ್ಥಾನ 07, ಪ.ಜಾತಿ ಮೀಸಲು ಸ್ಥಾನ 01, ಪ.ಪಂಗಡ ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ ಎ ಮೀಸಲು 1, ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನ 1, ಮಹಿಳಾ ಮೀಸಲು ಸ್ಥಾನ 2, ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ನಾಮಪತ್ರ ಸಲ್ಲಿಸಲು ಜೂ.13 ರಿಂದ ಪ್ರಾರಂಭಗೊಳ್ಳಲಿದ್ದು ಕೊನೆಯ ದಿನಾಂಕ ಜೂ.17 ಆಗಿರುತ್ತದೆ.
ನಾಮಪತ್ರ ಪರಿಶೀಲನೆ ಜೂ.18 ರಂದು ನಡೆಯಲಿದ್ದು,ಹಿಂಪಡೆಯಲು ಜೂ.18 ಕೊನೆಯ ದಿನವಾಗಿರುತ್ತದೆ.


ಚಿಹ್ನೆ ಹಂಚಿಕೆ ಜೂ.19 ರಂದು ನಡೆಯಲಿದ್ದು.ಜೂ.25 ರಂದು ಚುನಾವಣೆ ನಡೆದು ಸಂಜೆ ಫಲಿತಾಂಶ ಲಭ್ಯವಾಗಲಿದೆ.