ಸುಳ್ಯ ರೋಟರಿ ಶಾಲೆಯಲ್ಲಿ ಪ್ರಿ-ಕೆಜಿ ತರಗತಿ ಆರಂಭ

0

ಸುಳ್ಯದ ರೋಟರಿ ಶಾಲೆಯಲ್ಲಿ ಪ್ರಿ-ಕೆಜಿ ಕ್ಲಾಸ್ ನ ಉದ್ಘಾಟನಾ ಸಮಾರಂಭ ಇಂದು ನಡೆಯಿತು.


ರೋಟರಿ ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ಚಂದ್ರಶೇಖರ ಪೇರಾಲು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಕ್ಕಳಿಗೆ ಪೋಷಕರಿಗೆ ಹಿತವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಸಂಚಾಲಕ ಗಿರಿಜಾ ಶಂಕರ್ ತುದಿಯಡ್ಕ ಪ್ರಿ-ಕೆಜಿ ಕ್ಲಾಸ್ ರೂಮನ್ನು ಆರಂಭಗೊಳಿಸಿ, ಮಾತನಾಡಿದರು.


ರೋಟರಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆಯವರು ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಉಪಸ್ಥಿತರಿದ್ದರು.


ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ.ಎಸ್. ಸ್ವಾಗತಿಸಿದರು. ಎಲ್ ಕೆ ಜಿ ವಿದ್ಯಾರ್ಥಿನಿ ಮಹನೀಯ ಶ್ಲೋಕ ಗೀತೆ ಹಾಡಿದರು. ಕಲಾ ಶಿಕ್ಷಕ ಪದ್ಮನಾಭ ಕೊಯಿನಾಡು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


ನರ್ಸರಿ ಶಿಕ್ಷಕಿಯರಾದ ಶ್ರೀಮತಿ ಮಲ್ಲಿಕಾ, ಶ್ರೀಮತಿ ಸಂಗೀತ ಪ್ರಾರ್ಥನ ಗೀತೆ ಹಾಡಿದರು. ಶ್ರೀಮತಿ ವಿಜಯಲಕ್ಷ್ಮಿ ಕೆ ಮತ್ತು ಶ್ರೀಮತಿ ಸವಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ಎನ್. ಸಹಕರಿಸಿದರು.