ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ “ಮನೋವಿಜ್ಞಾನ ಸಕಾರಾತ್ಮಕ” ಕಾರ್ಯಾಗಾರ

0

ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ ವಿದ್ಯಾಲಯದಲ್ಲಿ
ತಂತ್ರಜ್ಞಾನ, ಸ್ಮಾರ್ಟ್‌ಫೋನ್ ಇದರ ಅತೀವ ಬಳಕೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಮಾನಸಿಕ ಅಸಮತೋಲನ, ಪರೀಕ್ಷಾ ಭಯ ಹಾಗೂ ಅದರ ನಿವಾರಣೆಯ ಬಗ್ಗೆ ಖ್ಯಾತ ಮನಃಶಾಸ್ತ್ರಜ್ಞ ನವೀನ್ ಎಲ್ಲಂಗಳ ಇವರಿಂದ ಮನೋವಿಜ್ಞಾನ ಸಕಾರಾತ್ಮಕ ವಿಶೇಷ ಕಾರ್ಯಾಗಾರ ಜೂ. 12 ರಂದು ‌ನಡೆಯಿತು.


ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಬಿಳಿನೆಲೆ ಯ ಮುಖ್ಯೋಪಾಧ್ಯಾಯರಾದ ಸತ್ಯಶಂಕರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುl ಶುಚಿ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಗಣೇಶ್ ಪ್ರಸಾದ್, ಚಂದ್ರಶೇಖರ ‌ನಾಯರ್, ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಉಪಸ್ಥಿತರಿದ್ದರು.


ಕಾರ್ಯಕ್ರಮದ ನಿರೂಪಣೆಯನ್ನು ವರ್ಷ ಬೇಕಲ್ ಮಾಡಿದರು.