ಕಂದ್ರಪ್ಪಾಡಿ ಶಾಲೆಯ ಶತಮಾನೋತ್ಸವದ ಪ್ರಯುಕ್ತ ಕಾಮಗಾರಿಗೆ ಗುದ್ದಲಿಪೂಜೆ – ಸಭಾ ಕಾರ್ಯಕ್ರಮ

0

ಸರಕಾರಿ ಹಿ.ಪ್ರಾ.ಶಾಲೆ ಕಂದ್ರಪ್ಪಾಡಿಯು ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು, ಇದರ ಪೂರ್ವಭಾವಿಯಾಗಿ ಶಾಲಾ ಆಟದ ಮೈದಾನದ ವಿಸ್ತರಣಾ ಕಾಮಗಾರಿ ಆರಂಭಿಸಲಾಯಿತು. ಈ ಕಾಮಗಾರಿಯ ಗುದ್ದಲಿಪೂಜೆಯನ್ನು ಮಾಯಿಲಪ್ಪ ಗೌಡ ಮುಂಡೋಡಿಯವರು ಇಂದು(ಜೂ.12) ನೆರವೆರಿಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ವಹಿಸಿದ್ದರು.‌

ವೇದಿಕೆಯಲ್ಲಿ ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂದ್ರಪ್ಪಾಡಿ,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ, ದೇವಚಳ್ಳ ಗ್ರಾಮ ಪಂಚಯತ್ ಸದಸ್ಯ ಭವಾನಿಶಂಕರ್ ಮುಂಡೋಡಿ, ಶಾಲೆಯ ಮುಖ್ಯ ಗುರುಗಳಾದ ವಾಣಿ ಕೆ.ಎಸ್. ಉಪಸ್ಥಿತರಿದ್ದರು.‌


ಸಭೆಯಲ್ಲಿ ಶತಮಾನೋತ್ಸವದ ಸಮಿತಿಯ ಸದಸ್ಯರುಗಳು, ಹಳೆವಿದ್ಯಾರ್ಥಿಗಳು, ಪೋಷಕರು, ಶಾಲಾ ಮಕ್ಕಳು, ಉಪಸಿತ್ತರಿದ್ದರು. ಅಜಯ್ ಕಾರ್ಯಕ್ರಮ ನಿರೂಪಿಸಿದರು.