ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ ವಿದ್ಯಾರ್ಥಿ ನಾಯಕನಾಗಿ ಪ್ರದೀಶ್, ಉಪಮುಖ್ಯಮಂತ್ರಿಯಾಗಿ ಯಶ್ವಿನಿ ಪಿ ಎಸ್

0

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇದರ 2023 – 24ನೇ ಶೈಕ್ಷಣಿಕ ವರ್ಷದ ಶಾಲಾ ಮುಖ್ಯಮಂತ್ರಿಯ ಚುನಾವಣೆಯು ನಡೆಯಿತು.

ಚುನಾವಣೆಯು ಪ್ರಜಾಪ್ರಭುತ್ವ ರೀತಿಯಲ್ಲಿ ವಿದ್ಯಾರ್ಥಿಗಳು ವೋಟಿಂಗ್ ಮಿಷನ್ ನಂತೆ ಹೋಲುವ ಮೊಬೈಲ್ ಆಪ್ ನ ಮೂಲಕ ಮತದಾನ ಮಾಡಿ ತಮ್ಮ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡಿದರು. 6ನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳು ಮತದಾನ ಮಾಡುವುದಕ್ಕೆ ಅರ್ಹರಾಗಿದ್ದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಶಶಿಕಾಂತ್ ಎಂ ಕಾರ್ಯನಿರ್ವಹಿಸಿದರು.

ತಾಂತ್ರಿಕ ಸಹಾಯಕರಾಗಿ ಶಿಕ್ಷಕ ಯೋಗನಾಥ್ ಕಾರ್ಯನಿರ್ವಹಿಸಿದರು ಮತ್ತು ಮತಗಟ್ಟೆ ಯ ಅಧಿಕಾರಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸಿದರು. ಅತಿ ಹೆಚ್ಚು ಮತಗಳನ್ನು ಪಡೆದು ವಿದ್ಯಾರ್ಥಿ ನಾಯಕನಾಗಿ ಹತ್ತನೇ ತರಗತಿಯ ಪ್ರದೀಶ್ ಆಯ್ಕೆಯಾದರೂ. ಉಪಮುಖ್ಯಮಂತ್ರಿಯಾಗಿ ಯಶ್ವಿನಿ ಪಿ ಎಸ್ ಆಯ್ಕೆಯಾದರು.