ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರಿ.ಕೆ.ಜಿ.,ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭೋತ್ಸವ

0

ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಸುಳ್ಯ ಶಾಲೆಯಲ್ಲಿ ಕೆ.ಜಿ.ಸೆಕ್ಷನ್ ಫ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಹೊಸ ದಾಖಲಾತಿ ಮಾಡಿದ ಚಿಣ್ಣರಿಗೆ ಪ್ರೀತಿ ಪೂರ್ವಕ ಸ್ವಾಗತ ಕೋರಲಾಯಿತು.


ಆಡಳಿತ ಮಂಡಳಿ ಅದ್ಯಕ್ಷರಾದ ಕೆ.ಎಮ್ ಅಬ್ದುಲ್ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಲತೀಪ್ ಹರ್ಲಡ್ಕ,ನಿರ್ದೇಶಕರಾದ ಕೆ.ಎಮ್ ಮುಸ್ತಫಾ ಜನತಾ,ಸಂಚಾಲಕಾರಾದ ಕೆ.ಎಮ್ ಮುಹಿಯುದ್ದೀನ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯೋಪಾದ್ಯಾಯರಾದ ಎಮ್.ಎಸ್ ಅಬ್ದುಲ್ ರಹೀಮ್ ಸ್ವಾಗತಿಸಿದರು.


ಅನ್ಸಾರಿಯಾ ಶರೀಅತ್ ಕಾಲೇಜು ಮುದರ್ರಿಸ್ ಸಯ್ಯದ್ ಹುಸೈನ್ ತಂಗಳ್ ಪ್ರಾರ್ಥನೆ ಮಾಡಿದರು. ಕಲಾ ಶಿಕ್ಷಕರಾದ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಹಸೀನಾ ವಂದಿಸಿದರು. ಮಕ್ಕಳಿಗೆ ಉಡುಗೊರೆ ಜೊತೆ ಸಿಹಿ ವಿತರಿಸಲಾಯಿತು. ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.