ಜೂನ್ 15 ರಂದು ಶೇಣಿಯಲ್ಲಿ ಇಂದಿರಾ ಸೇವಾ ಕೇಂದ್ರ ಪ್ರಾರಂಭ

0

ಅಮರಮೂಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಮತ್ತು ಸ್ಥಳೀಯ ಕಳಂಜ ಮತ್ತು ಐವರ್ನಾಡು ಗ್ರಾಮದ ನಿವಾಸಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 2023ರ ರಾಜ್ಯ ಚುನಾವಣಾ ಸಂದರ್ಭದಲ್ಲಿ ನೀಡಿದ ಗ್ಯಾರಂಟಿಯನ್ನು ಇದೀಗ ಅಧಿಕ್ರತವಾಗಿ ಕಾಂಗ್ರೆಸ್ ಸರಕಾರವು ಘೋಷಣೆ ಮಾಡಿದ್ದು ಅದರ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಚೂಂತಾರುದವರ ನೇತೃತ್ವದಲ್ಲಿ ಶೇಣಿಯಲ್ಲಿ ಇಂದಿರಾ ಸೇವಾ ಕೇಂದ್ರ ವನ್ನು ದಿನಾಂಕ ಜೂನ್ 15 ರಿಂದ ಸಂಜೆ 5.00 ರಿಂದ 8.00ರ ತನಕ ಪ್ರಾರಂಭಿಸಿ ಫಲಾನುಭವಿಗಳಿಗೆ ಒಂದು ತಿಂಗಳ ಕಾಲ ನಮ್ಮ ಗ್ಯಾರಂಟಿ – ನಿಮ್ಮ ಬಳಿಗೆ ಅಭಿಯಾನದ ಮೂಲಕ ಉಚಿತವಾಗಿ ಸೇವೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದು, ಅದರಂತೆ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಲು ಸಹಾಯವಾಣಿ 9008179329 ಗೆ ಸಂಪರ್ಕಿಸಲು ಆಯೋಜಕರಾದ ಅಶೋಕ್ ಚೂಂತಾರು ಪತ್ರಿಕೆಗೆ ತಿಳಿಸಿದ್ದಾರೆ.