ರಕ್ತದಾನವು ಸಮಾಜ ಸೇವಾ ಕಾರ್ಯದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ: ತಹಶೀಲ್ದಾರ್ ಮಂಜುನಾಥ್

0

ಪ್ರಸ್ತುತ ದಿನಗಳಲ್ಲಿ ಧಾರ್ಮಿಕ ಹಬ್ಬಗಳ ಸಾಲಿನಲ್ಲಿ ವಿಶ್ವ ರಕ್ತದಾನ ದಿನವೂ ಸೇರಿಕೊಂಡಂತಿದೆ: ಪಿ .ಬಿ. ಸುಧಾಕರ್ ರೈ

ರಕ್ತದಾನ ಎಂಬುವುದು ಸಮಾಜ ಸೇವೆಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ. ವಿವಿಧ ಸಂಘ-ಸಂಸ್ಥೆಗಳು, ರಕ್ತದಾನಿಗಳು ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಸಾವಿರಾರು ಜೀವಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸುಳ್ಯ ತಹಶೀಲ್ದಾರ್ ಮಂಜುನಾಥ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.


ಅವರು ಇಂದು ಕೊಡಿಯಾಲ ಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ರಕ್ತ ದಾನಿಗಳ ದಿನಾಚರಣೆ ಮತ್ತು ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್ ವಹಿಸಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಇದರ ಸಭಾಪತಿ ಹಾಗೂ ರಕ್ತದಾನಿ ಪಿ ಬಿ ಸುಧಾಕರ್ ರೈ ಅಭಿನಂದನಾ ಭಾಷಣದಲ್ಲಿ ಮಾತನಾಡಿ ‘ವಿಶ್ವ ರಕ್ತ ದಿನಾಚರಣೆಯು ಇತ್ತೀಚಿನ ದಿನಗಳಲ್ಲಿ ಎಲ್ಲಾ ಧರ್ಮದ ಹಬ್ಬದ ದಿನಗಳ ಸಾಲಿನಲ್ಲಿ ಸೇರಿಕೊಳ್ಳುವಂತಾಗಿದೆ ಎಂದು ದಿನದ ಮಹತ್ವದ ಬಗ್ಗೆ ತಿಳಿಸಿದರು.


ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಪ್ರತಿನಿಧಿ ಸಿ.ಎ ಗಣೇಶ್ ಭಟ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಖಜಾಂಜಿ ವಿನಯಕುಮಾರ್ ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಂಟಿ ಸಂಘಟನೆಯ ಆಶ್ರಯದಲ್ಲಿ ಭಾರತೀಯ ಸೇನೆಯಿಂದ ನಿವೃತ್ತಿಗೊಂಡು ಇಂದು ಸ್ವಂತ ಊರಿಗೆ ಮರಳಿದ ಸುಳ್ಯದ ಅಜ್ಜಾವರದ ಲೋಕೇಶ್ ಇರಂತಮಜಲು ಅವರನ್ನು ಸ್ವಾಗತಿಸುವ ವಿಶೇಷ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಘಟನೆಗಳನ್ನು ಸನ್ಮಾನಿಸುವ ಕಾರ್ಯ ನಡೆದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ನ ಮುಖ್ಯಸ್ಥ ಬಾಲಕೃಷ್ಣ,ಸಮಾಜ ಕಾರ್ಯ ಮೂಲಕ ನೂರಾರು ಬಡವರಿಗೆ ಸಹಾಯ ಹಸ್ತವನ್ನು ನೀಡಿದ ಪೈಚಾರಿನ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಆರ್ ಬಿ ಬಶೀರ್, ಎನ್ ಎಂ ಸಿ ಯೂತ್ ರೆಡ್ ಕ್ರಾಸ್,ಲಯನ್ಸ್ ಕ್ಲಬ್ ಹಿರಿಯಡ್ಕ ಉಡುಪಿ,ರೋಟರಿ ಕ್ಲಬ್ ಸುಳ್ಯ,ರೋಟರಿ ಕ್ಲಬ್ ಸುಳ್ಯ ಸಿಟಿ,ಶೌರ್ಯ ವಿಪತ್ತು ಘಟಕ ಕ್ಷೇತ್ರ ಧ. ಗ್ರಾ.ಯೋ.(ರಿ) ಸಂಪಾಜೆ ವಲಯ,ಶೌರ್ಯ ವಿಪತ್ತು ನಿರ್ವಹಣಾ ಘಟಕ ಶ್ರೀ ಕ್ಷೇತ್ರ ಧ. ಗ್ರಾ.ಯೋ.(ರಿ) ಸುಬ್ರಹ್ಮಣ್ಯ ವಲಯ,ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು,ಮಂಜುಶ್ರೀ ಗೆಳೆಯರ ಬಳಗ ಐವರ್ನಾಡು, ಯುವ ತೇಜಶು ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಹಿಂದಿ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿ ಅರ್ಥಶಾಸ್ತ್ರ ವಿಭಾಗದ ಉದಯ ಶಂಕರ್ ವಂದಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಕಾರ್ಯದರ್ಶಿ ತಿಪ್ಪೇಶ್ ಕಾರ್ಯಕ್ರಮ ನಿರೂಪಿಸಿದರು.

ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.