ಕೊಡಗು ಸಂಪಾಜೆ, ಚೆಂಬು, ಪೆರಾಜೆ ಗ್ರಾ. ಪಂ. ಅಧ್ಯಕ್ಷ , ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

0

ಕೊಡಗು ಸಂಪಾಜೆ, ಚೆಂಬು, ಪೆರಾಜೆ ಸಹಿತ ಮಡಿಕೇರಿ ತಾಲೂಕಿನ ಗ್ರಾ. ಪಂ. ಗಳ ಅಧ್ಯಕ್ಷ , ಉಪಾಧ್ಯಕ್ಷತೆಗೆ ಮೀಸಲಾತಿ ಇಂದು ನಿಗದಿಗೊಳಿಸಲಾಗಿದೆ.

ಕೊಡಗು ಸಂಪಾಜೆ ಪಂಚಾಯತ್ ನಲ್ಲಿ ಅಧ್ಯಕ್ಷತೆ ಸಾಮಾನ್ಯ ಸ್ಥಾನಕ್ಕೆ ಉಪಾಧ್ಯಕ್ಷತೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷತೆಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಕುಮಾರ್ ಚೆದ್ಕಾರ್ ಜಗದೀಶ, ರಮಾದೇವಿ ಕಳಗಿ, ನಿರ್ಮಲಾ ಭರತ, ನವೀನ್, ಅನಿಲ್ ಇವರಿಗೆ ಅವಕಾಶವಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪೂರ್ಣಿಮಾರವರಿಗೆ ಅವಕಾಶವಿದೆ.

ಪೆರಾಜೆಯಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ ಬಿ. ಮಹಿಳೆಗೆ, ಉಪಾಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪೆರಾಜೆಯಲ್ಲಿ ಅಧ್ಯಕ್ಷತೆಗೆ ಈ ಹಿಂದೆ ಅಧ್ಯಕ್ಷರಾಗಿರುವ ಚಂದ್ರಕಲಾ ರವರು ಎರಡನೇ ಅವಧಿಗೂ ಅವಕಾಶವಿದೆ. ಉಪಾಧ್ಯಕ್ಷತೆಗೆ ನಂಜಪ್ಪ ನಿಡ್ಯಮಲೆ, ಉದಯ್ ಕುಮಾರ ಕುಂಬಳಚೇರಿ ಪ್ರವೀಣ್ ಮಜಿಕೋಡಿ, ಸುಭಾಷ್ ಬಂಗಾರಕೋಡಿ ಇವರಿಗೆ ಅವಕಾಶವಿದೆ.

ಚೆಂಬು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷತೆ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷತೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಚೆಂಚು ಸಾಮಾನ್ಯ ವರ್ಗಕ್ಕೆ ರಮೇಶ್ ಹುಲ್ಲುಬೆಂಕಿ ವಸಂತ ಎನ್.ಟಿ, ತೀರ್ಥರಾಮ ಇವರಿಗೆ ಅವಕಾಶವಿದ್ದು, ಉಪಾಧ್ಯಕ್ಷತೆಗೆ ಶಾರದಾ ಸೂರ್ಯ ರವರಿಗೆ ಅವಕಾಶವಿದೆ

ಕರಿಕೆಯಲ್ಲಿ ಅಧ್ಯಕ್ಷತೆ ಸಾಮಾನ್ಯಕ್ಕೆ ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.