ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕೋರ್ ಕಮಿಟಿಯನ್ನು ವಿಸರ್ಜಿಸಿದ ಬ್ಲಾಕ್ ಅಧ್ಯಕ್ಷರು

0

ಶೀಘ್ರವೇ ಎರಡೂ ಸಮಿತಿಗಳ ಪುನರ್ ರಚನೆ : ಪಿ.ಸಿ.ಜಯರಾಮ್

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಅವರು ಅಧ್ಯಕ್ಷರಾದ ಬಳಿಕ ರಚಿಸಲಾದ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕೋರ್ ಕಮಿಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ.

ಪತ್ರಿಕಾ ಹೇಳಿಕೆಯ ಮೂಲಕ ಈ ವಿಚಾರ ತಿಳಿಸಿರುವ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ರವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ನನ್ನನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದ್ದರು. ಆ ಬಳಿಕ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಎಲ್ಲ ಗ್ರಾಮಗಳಿಗೆ ಪ್ರಾತಿನಿದ್ಯ ಇರುವಂತೆ ವಿಸ್ತೃತವಾಗಿ ರಚಿಸಿದ್ದೆ. ಅಲ್ಲದೇ ತಾಲೂಕಿನ ಪ್ರಮುಖರನ್ನೊಳಗೊಂಡ ಕೋರ್ ಕಮಿಟಿಯನ್ನು ರಚಿಸಿ ಪಕ್ಷದ ಚಟುವಟಿಕೆಗಳನ್ನು ನಡೆಸುಕೊಂಡು ಬಂದಿದ್ದೇನೆ.

ಈ ಎರಡೂ ಸಮಿತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕೋರ್ ಕಮಿಟಿಯನ್ನು ಶೀಘ್ರವೇ ಪುನರ್ ರಚಿಸಲಿದ್ದೇವೆ ಎಂದು ತಿಳಿಸಿದ್ದಾರೆ.