ಮಹಿಳೆ ಮನೆಯವರ ಪತ್ತೆ

0

ಉತ್ತರಕನ್ನಡದಿಂದ ಸುಳ್ಯಕ್ಕೆ ಬಂದಿದ್ದ ಮಹಿಳೆ ಊರಿನತ್ತ ಪ್ರಯಾಣ

ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಮಹಿಳೆಯೊಬ್ಬರು ನಿನ್ನೆ ಸಂಜೆ ಸುಳ್ಯ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಪೋಲೀಷರಿಗೆ ವಿಷಯ ತಿಳಿದು ಠಾಣೆಗೆ‌ ಕರೆದುಕೊಂಡು ಹೋದರು.
ಆದರೆ ಆಕೆಯನ್ನು ವಿಚಾರಿಸಿದರೂ ಯಾವುದೇ ಮಾಹಿತಿ ಆಕೆ ನೀಡುತ್ತಿರಲಿಲ್ಲ. ರಾತ್ರಿಯಾದುದರಿಂದ ಆ ಮಹಿಳೆಯನ್ನು ಪೋಲೀಸರು ಸುಳ್ಯದ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು.

ಮಹಿಳೆ ಹೊನ್ನಾವರ ದರೆಂದು ಆಕೆಯ ಆಧಾರ್ ಕಾರ್ಡ್ ನಲ್ಲಿ ಗೊತ್ತಾಯಿತು. ಬಳಿಕ ಮನೆಯವರ ಹುಡುಕಾಟ ನಡೆದು ಮನೆಯವರು ಯಾರೆಂದು ಗೊತ್ತಾಗಿ ಆ ಮಹಿಳೆ ಯನ್ನು ಸುಳ್ಯದಿಂದ ಗೋಕರ್ಣ ಬಸ್ ನಲ್ಲಿ ಹೊನ್ನಾವರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.