ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆ ಒದಗಿಸುವಂತೆ ಸುಳ್ಯ ಶಾಸಕರಿಗೆ ಮರ್ಕಂಜ ಗ್ರಾಮಸ್ಥರ ಮನವಿ

0

ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆ ಒದಗಿಸುವಂತೆ ಹಾಗೂ ಗ್ರಾಮದ ಇತರ ಪ್ರಾಮುಖ್ಯ ಬೇಡಿಕೆ ಈಡೇರಿಸುವಂತೆ ಸುಳ್ಯ ಶಾಸಕರಿಗೆ ಮರ್ಕಂಜ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಶಾಸಕರಿಗೆ ಗ್ರಾಮದ ಪ್ರಮುಖ ಮೂರು ಬೇಡಿಕೆಗಳಾದ ಎಲಿಮಲೆ ಮರ್ಕಂಜ ಆಡ್ತಲೆ ರಸ್ತೆ ಅಭಿವೃದ್ಧಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ಸಿನ ವ್ಯವಸ್ಥೆ, ಹಾಗೂ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತ ಸಾರ್ವಜನಿಕ ಸೇವೆ ಒದಗಿಸುವಂತೆ ಮನವಿ ಸಲ್ಲಿಸಿದರು. ಮರ್ಕಂಜದಲ್ಲಿ‌ ನಡೆದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಮನವು ಸಲ್ಲಿಸಲಾಯಿತು. ‌