ಮಂಡೆಕೋಲು: ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

0


ಅಕ್ಷಯ ಸಂಜೀವಿನಿ ಮಂಡೆಕೋಲು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ನೂತನ ಸಮಿತಿಯ ಪದಗ್ರಹಣ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ನೂತನ ಅಧ್ಯಕ್ಷ ರಾಗಿ ಸತ್ಯವತಿ ಪೇರಾಲು, ಕಾರ್ಯದರ್ಶಿ ಯಾಗಿ ಕೆ . ಆರ್. ಪದ್ಮಾವತಿ ಮಡಿವಾಳಮೂಲೆ, ಉಪಾಧ್ಯಕ್ಷ ರಾಗಿ ಉಷಾ ದೇವರಗುಂಡ, ಕೋಶಾಧಿಕಾರಿಯಾಗಿ ಕುಸುಮ ದೇವರಗುಂಡ, ಜತೆ ಕಾರ್ಯದರ್ಶಿಯಾಗಿ ಸುಂದರಿ ಚೌಟಜೆ ಆಯ್ಕೆಯಾದರು.

ಉಪಸಮಿತಿಗೆ ಏಳು ಜನ‌ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ಒಕ್ಕೂಟದ ಅಧ್ಯಕ್ಷ ರು, ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, NRLM‌ನ ಮೇಲ್ವಿಚಾರಕರಾದ ಮಹೇಶ್ , ಎಂಬಿಕೆ, ಎಲ್ ಸಿ‌ಆರ್ ಪಿ ಗಳು, ಕೃಷಿ ಸಖಿ,‌ಪಶು ಸಖಿ ಹಾಗೂ‌ ಸಂಘದ ಸದಸ್ಯರು ‌ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್‌ಸಿಆರ್ ಪಿ ಚಂದ್ರಾವತಿ ಪ್ರಾರ್ಥಿಸಿದರು.
ಎಲ್ ಸಿ‌ಆರ್ ಪಿ ಪ್ರತಿಮಾ ಸ್ವಾಗತಿಸಿ, ಸುನಿತಾ ಕೃಷಿ ಸಖಿ ವಂದಿಸಿದರು. ಎಂ.ಬಿ.ಕೆ. ವನಿತ ವಂದಿಸಿದರು.