ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪದಗ್ರಹಣ ಸಮಾರಂಭ

0

ಶಶಿಧರ ಬಿ.ಕೆ.ತಂಡದಿಂದ ಅಧಿಕಾರ ಸ್ವೀಕಾರ

ಮೋಹನ್ ತಂಟೆಪ್ಪಾಡಿ ದಂಪತಿಗೆ ಸನ್ಮಾನ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ನೂತನ ಅಧ್ಯಕ್ಷ ಶಶಿಧರ ಬಿ.ಕೆ, ಕಾರ್ಯದರ್ಶಿ ವಿಶ್ವನಾಥ ಕೆ, ಕೋಶಾಧಿಕಾರಿ ನಾಗೇಶ್ ಕುಲಾಲ್ ಇವರ ನೇತೃತ್ವದ ತಂಡದ ಪದಗ್ರಹಣ ಸಮಾರಂಭವು ಜು.15 ರಂದು ಬೆಳ್ಳಾರೆ ದೇವಿ ಹೈಟ್ಸ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ರೊ.ಕೇಶವಮೂರ್ತಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.
ನೂತನ ತಂಡಕ್ಕೆ ಪೂರ್ವ ಜಿಲ್ಲಾ ಗವರ್ನರ್ ರೊ.ಡಾ.ಭಾಸ್ಕರ ಎಸ್.ರವರು ಪದಗ್ರಹಣ ನೆರವೇರಿಸಿದರು.


ಪದಗ್ರಹಣದ ನಂತರ ನೂತನ ಅಧ್ಯಕ್ಷ ಬಿ.ಕೆ.ಶಶಿಧರ್ ರವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.

ಮುಖ್ಯ ಅತಿಥಿಗಳಾಗಿ ವಲಯದ ಸಹಾಯಕ ಗವರ್ನರ್ ರೊ.ಪುರಂದರ ರೈ, ಝೋನಲ್ ಲೆಪ್ಟಿನೆಂಟ್ ರೊ.ಪದ್ಮನಾಭ ಬೀಡು, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ,ರೊ.ರವೀಂದ್ರ ಗೌಡ,ಶ್ರೀಮತಿ ಸ್ವರ್ಣಚಂದ್ರಿಕಾ, ಶ್ರೀಮತಿ ಪ್ರಭಾಪಾರ್ವತಿಯವರು ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ರೊ.ಕೇಶವಮೂರ್ತಿ ಕ್ಲಬ್ ನ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯದರ್ಶಿ ರೊ.ರವೀಂದ್ರ ಗೌಡ ವರದಿ ಮಂಡಿಸಿದರು.
ಪದಗ್ರಹಣ ಅಧಿಕಾರಿಯ ಹಾಗೂ ಅತಿಥಿಗಳ ಪರಿಚಯವನ್ನು ರೊ.ಕರುಣಾಕರ ಆಳ್ವ, ರೊ.ಪ್ರಮೋದ್ ರೈ ಕುಂಟುಪುಣಿಗುತ್ತು,ರೊ.ನಾಗೇಶ್ ಕುಲಾಲ್,ರೊ.ಮೋನಪ್ಪ ತಂಬಿನಮಕ್ಕಿ ಪರಿಚಯಿಸಿದರು.
ರೋಟರಿ ಸಂಸ್ಥೆಗೆ 9 ಮಂದಿ ಸದಸ್ಯರ ಸೇರ್ಪಡೆ
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ 9 ಮಂದಿ ಸದಸ್ಯರು ಹೊಸದಾಗಿ ಸೇರ್ಪಡೆಗೊಂಡರು.
ಸತ್ಯನಾರಾಯಣ ಸಿ.ಕೆ, ರಾಜೇಶ್ ಬಿ, ರವಿರಾಜ್, ಬಾಲಕೃಷ್ಣ ಮಡ್ತಿಲ ನಿವೃತ್ತ ಬಿಎಸ್ಸೆನ್ನೆಲ್, ಹರ್ಷಿತ್ ಗೆಜ್ಜೆಮನೆ,ಅನಂತಕೃಷ್ಣ ತಂಟೆಪ್ಪಾಡಿ,ಅಬ್ದುಲ್ ರಹಿಮಾನ್, ವಿಜಯ್ ಬರೊಡ ಬ್ಯಾಂಕ್ ರವರು ಸೇರ್ಪಡೆಗೊಂಡರು.
ರೊ.ಎ.ಕೆ.ಮಣಿಯಾಣಿ ಹೊಸ ಸೇರ್ಪಡೆಯಾದವರ ವಿವರವನ್ನು ನೀಡಿದರು.

ಸನ್ಮಾನ
ಸಮಾರಂಭದಲ್ಲಿ ಬೆಂಗಳೂರಿನಲ್ಲಿ ಅಟೋಮೇಶನ್ ಆದರಿತ ಉದ್ಯಮ ಮೆಕೋಸ್ ಟೆಕ್ನಾಲಜಿ ಸರ್ವಿಸಸ್ ಪ್ರೈ.ಲಿ.ನ ಮಾಲಕರಾದ ಮೋಹನ್ ತಂಟೆಪ್ಪಾಡಿ ದಂಪತಿಯನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರೊ.ಶಿವರಾಮ ಏನೆಕಲ್,ರೊ.ಡಾ.ಭಾಸ್ಕರ್ ,ರೊ.ಪುರಂದರ, ನಿರ್ಗಮನ ಅಧ್ಯಕ್ಷ ಕೇಶವಮೂರ್ತಿ,ಕಾರ್ಯದರ್ಶಿ ರವೀಂದ್ರ ಗೌಡರವರನ್ನು ಗೌರವಿಸಲಾಯಿತು.
ರೊ.ಪದ್ಮನಾಭ ಬೀಡು ಕ್ಲಬ್ಬಿನ ಬುಲೆಟಿನ್ ಬಿಡುಗಡೆ ಮಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿ ಆಶಿಶ್ ಗೋವಿಂದರವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಚೈತ್ರ,ಚರಣ್ ರಾಜ್,ನಿಶಾ,ಮನ್ವಿತ್,ಹಿತೇಶ್, ಮನಿಶ್ ರವರಿಗೆ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಯಿತು.

ಅಜ್ಜನಗದ್ದೆ ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ,ಇಂದ್ರಾಜೆ ಅಂಗನವಾಡಿ ಕೇಂದ್ರಕ್ಕೆ ಫ್ಯಾನ್,ಐವರ್ನಾಡು ಲೈಬ್ರೆರಿಗೆ ರ್ಯಾಕ್ ಕೊಡುಗೆಯಾಗಿ ನೀಡಲಾಯಿತು.ರೊ.ನವಿನ್ ರೈ ತಂಬಿನಮಕ್ಕಿ ವಿವರ ನೀಡಿದರು.
ವೈಷ್ಣವಿ ವಿ.ಪ್ರಾರ್ಥಿಸಿ, ರೊ.ಚಂದ್ರಶೇಖರ್ ಸ್ವಾಗತಿಸಿ,ರೊ.ಶ್ಯಾಮಸುಂದರ್ ಮತ್ತು ರೊ.ಪ್ರಭಾಕರ ಆಳ್ವ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರೊ.ವಿಶ್ವನಾಥರವರು ವಂದಿಸಿದರು.