ಕೆಲಸಕ್ಕಿದ್ದ ಮನೆಯಿಂದ ಚಿನ್ನ ಕದ್ದು ಸಿಕ್ಕ ಬಿದ್ದ ಟ್ಯಾಪರ್

0

ಟ್ಯಾಪಿಂಗ್‌ಗೆ ಬಂದಿದ್ದ ಕಾರ್ಮಿಕನೊಬ್ಬ ಮನೆಯಲ್ಲಿದ್ದ ಚಿನ್ನ ಮತ್ತು ನಗದು ಕದ್ದು ಸಿಕ್ಕಿ ಬಿದ್ದ ಘಟನೆ ಬಳ್ಪದಿಂದ ವರದಿಯಾಗಿದೆ.
ಬಳ್ಪದ ಎಣ್ಣೆಮಜಲು ಪುಟ್ಟಣ್ಣ ಗೌಡರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಮರ್ದಾಳದ ಪ್ರಸಾದ್ ಬಂದಿದ್ದ. ತಿಂಗಳ ಹಿಂದೆ ಪುಟ್ಟಣ್ಣ ಗೌಡರ ಮನೆಯವರು ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಆತ ಮನೆಯೊಳಗೆ ಹೋಗಿ ಸರ, ಉಂಗುರ, ಬೆಂಡ್ ಮೊದಲಾದ ಚಿನ್ನಾಭರಣಗಳನ್ನು ಹಾಗೂ 8000 ರೂ. ನಗದು ಕೂಡಾ ಕದ್ದಿದ್ದ. ಆದರೆ ಮನೆಯವರಿಗೆ ಇದು ಗೊತ್ತಾಗಿರಲಿಲ್ಲ. ಮರುದಿನ ಬೆಳಿಗ್ಗೆ ಆತ ತನ್ನ ಊರಾದ ಮರ್ದಾಳಕ್ಕೆ ಹೋಗಿದ್ದ. ಮರುದಿನ ಸ್ವಲ್ಪ ಹೊತ್ತಿನ ನಂತರ ಚಿನ್ನ ಮತ್ತು ನಗದು ಕಾಣೆಯಾಗಿರುವ ವಿಚಾರ ಮನೆಯವರಿಗೆ ತಿಳಿಯಿತು. ಚಿನ್ನ ಕಾ

ಣೆಯಾಗಿರುವುದು ಮತ್ತು ಟ್ಯಾಪರ್ ಊರಿಗೆ ಹೋಗಿರುವುದು ಮನೆಯವರಿಗೆ ಅನುಮಾನ ಹುಟ್ಟಿಸಿ, ಅವರು ಸುಬ್ರಹ್ಮಣ್ಯ ಪೋಲೀಸರಿಗೆ ವಿಷಯ ತಿಳಿಸಿದರು. ಅಂದೇ ಸಂಜೆ ಪೋಲೀಸರೊಂದಿಗೆ ಮರ್ದಾಳಕ್ಕೆ ಹೋಗಿ ಟ್ಯಾಪರ್ ಪ್ರಸಾದ್ ನ ಬಗ್ಗೆ ವಿಚಾರಿಸಿದಾಗ, ಆತ ಹಿಂದೆಯೂ ಕೆಲಸಕ್ಕೆ ಹೋದಲ್ಲಿ ಹಣ ಕದ್ದಿರುವನೆಂಬ ಮಾಹಿತಿ ದೊರೆಯಿತು. ಆತನ ಮನೆಗೆ ಹೋಗಿ ವಿಚಾರಿಸಿದಾಗ ಆತ ಮನೆಯಲ್ಲಿರಲಿಲ್ಲ. ಬೇರೆ ಮನೆಯಲ್ಲಿರುವುದು ಗೊತ್ತಾಗಿ ಅಲ್ಲಿಗೆ ಹೋಗಿ ಆತನನ್ನು ಹಿಡಿದು, ಸುಬ್ರಹ್ಮಣ್ಯ ಠಾಣೆಗೆ ಕರೆತರಲಾಯಿತು.

ಠಾಣೆಯಲ್ಲಿ ವಿಚಾರಣೆಗೊಳಪಡಿಸಿದಾಗ, ಆತ ತಾನು ಚಿನ್ನ ಮತ್ತು ನಗದು ಕದ್ದಿರುವುದನ್ನು ಒಪ್ಪಿಕೊಂಡನೆನ್ನಲಾಗಿದೆ. ಪೊಲೀಸರು ಆತನನ್ನು ಕರೆದುಕೊಂಡು ಎಣ್ಣೆಮಜಲು ಮನೆಗೆ ಬಂದಾಗ ಮನೆಯ ಎದುರಿನ ಹೂವಿನ ಚಟ್ಟಿಯಲ್ಲಿ ಮಣ್ಣು ಅಗೆದು ಚಿನ್ನ ಅಡಗಿಸಿಟ್ಟಿರುವುದನ್ನು ಆತ ತೋರಿಸಿಕೊಟ್ಟನೆನ್ನಲಾಗಿದೆ. ನಗದು ಹಣ ಆತನಲ್ಲಿ ಖರ್ಚಾಗಿತ್ತೆಂದು ಹೇಳಲಾಗಿದೆ.
ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.