ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯನ ವಿರುದ್ಧ ಸುಳ್ಳು ದೂರು: ದ.ಸಂ.ಸ

0

ಜು.22 ರಂದು ಬೆಳ್ಳಾರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆಗೆ ನಿರ್ಧಾರ

ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿಯವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿ ದಲಿತ ದೌರ್ಜನ್ಯ ಕಾಯಿದೆಯನ್ನು ಉಲ್ಲಂಘಿಸಲಾಗಿದ್ದು, ಕೂಡಲೇ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು.ಇಲ್ಲವಾದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕ.ರಾ.ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ತಿಳಿಸಿದ್ದಾರೆ.

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ನಂ.3 ರಲ್ಲಿ ದಾಮೋದರ ನಾಯ್ಕ ಎಂಬವರು ಗ್ರಾ.ಪಂ.ಚರಂಡಿಗೆ ಮಣ್ಣು ಹಾಕಿರುವುದಕ್ಕೆ ಗ್ರಾಮ ಪಂಚಾಯತ್ ನಿಂದ ಇವರಿಗೆ ಐದು ಬಾರಿ ಗ್ರಾ.ಪಂ.ನೋಟೀಸು ನೀಡಿದ್ದರೂ ಚರಂಡಿಯನ್ನು ತೆರವುಗೊಳಿಸದೇ ಇರುವುದರಿಂದ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣವಾದಂತೆ ಜು.18 ರಂದು ಮಣ್ಣು ತೆರವು ಮಾಡಲು ಪಂಚಾಯತ್ ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ಕೆಲಸವನ್ನು ನಿರ್ವಹಿಸಿರುತ್ತಾರೆ.

ಅದೇ ದಿನ ರಾತ್ರಿ ದಾಮೋದರ ನಾಯ್ಕ್ ಎಂಬವರು ಪೊಲೀಸ್ ಠಾಣೆಗೆ ಹೋಗಿ ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ ಯವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಿ ಗ್ರಾಮ ಪಂಚಾಯತ್ ಸದಸ್ಯರ ಮಾನಹರಣ ಮಾಡಿರುತ್ತಾರೆ. ದಲಿತ ದೌರ್ಜನ್ಯ ಕೇಸು ದಾಖಲು ಮಾಡಿದ್ದಾರೆ. ಇದನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಜು.22 ರಂದು ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.