ಮಂಡೆಕೋಲಿನಲ್ಲಿ ವಿವಿಧ‌ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ

0

ಸುಗ್ರಾಮಗೊಂಡ ಮಂಡೆಕೋಲು ಗ್ರಾಮ : ಶಾಸಕಿ‌ ಭಾಗೀರಥಿ ಮುರುಳ್ಯ ಶ್ಲಾಘನೆ

ಒಂದು ಕಾಲದಲ್ಲಿ‌ ಕುಗ್ರಾಮವೆಂದು ಗುರುತಿಸಿಕೊಂಡ ಮಂಡೆಕೋಲು ಇಂದು ಅಭಿವೃದ್ಧಿಗೊಂಡು ಸುಗ್ರಾಮವಾಗಿ ರೂಪುಗೊಂಡಿದೆ ಎಂದು‌ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ದ.ಕ.ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಂಡೆಕೋಲು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ, ಅಮೃತ ಗ್ರಾಮ ಯೋಜನೆ ಮತ್ತು ಸರಕಾರದ ವಿಶೇಷ ಅನುದಾನದಿಂದ ಕೈಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಅಧ್ಯಕ್ಷತೆ ‌ವಹಿಸಿದರು.

ತಾಲೂಕು ಪಂಚಾಯತ್ ‌ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ತಹಶೀಲ್ದಾರ್ ಮಂಜುನಾಥ್, ಪಂಚಾಯತ್ ಉಪಾಧ್ಯಕ್ಷ ‌ಅನಿಲ್ ತೋಟಪ್ಪಾಡಿ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ವೇದಿಕೆಯಲ್ಲಿದ್ದರು.

ಪಂಚಾಯತ್ ಸದಸ್ಯೆ ದಿವ್ಯಲತಾ ಚೌಟಾಜೆ ಪ್ರಾರ್ಥಿಸಿದರು. ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ‌ ರಮೇಶ್ ಪಿ ಸ್ವಾಗತಿಸಿದರು.
ಶಿವಪ್ರಸಾದ್ ಉಗ್ರಾಣಿಮನೆ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಿಸಲಾಯಿತು. ಪಂಚಾಯತ್ ನ ಮಾಜಿ ಅಧ್ಯಕ್ಷ ರು, ನರೇಗಾ ಮಹಿಳಾ ಕಾರ್ಮಿಕರಿಗೆ ಗೌರವಾರ್ಪಣೆ ನಡೆಯಿತು.