ಭಾರೀ ಮಳೆ ಹಿನ್ನೆಲೆ: ಪರಿಸ್ಥಿತಿ ಅವಲೋಕಿಸಿ ತಹಶೀಲ್ದಾರ್ ಹಂತದಲ್ಲಿ ಆಯ್ದ ಶಾಲೆಗಳಿಗೆ ಮಾತ್ರ ರಜೆ

0

ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಇಲ್ಲ: ಡಿ.ಸಿ.

ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳ್ತಂಗಡಿ , ಪುತ್ತೂರು , ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.