ಅರಂತೋಡು: ಅಕ್ರಮ ಮದ್ಯ ಮಾರಾಟ- ಸೇವನೆ

0


ಪೊಲೀಸ್ ದಾಳಿ – ಪ್ರಕರಣ ದಾಖಲು

ಅರಂತೋಡು ಗ್ರಾಮದ ಕೊಡೆಂಕಿರಿ ಎಂಬಲ್ಲಿನ ಗೂಡಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಪತ್ತೆಹಚ್ಚಿ ಕೇಸು ದಾಖಲಿಸಿದ್ದಾರೆ.


ಕೊಡೆಂಕಿರಿಯ ಸುಬ್ಬಣ್ಣ ಎಂಬವರ ಗೂಡಂಗಡಿಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಜು. ೨೩ರಂದು ಸುಳ್ಯ ಪೊಲೀಸರು ದಾಳಿ ನಡೆಸಿ ಮೈಸೂರ್ ಲ್ಯಾನ್ಸರ್ ಕಂಪನಿಯ ಟೆಟ್ರಾ ಪ್ಯಾಕೇಟ್ ಮದ್ಯ ಹಾಗೂ ಬದಿಯಲ್ಲಿದ್ದ ನೀರಿನ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರೆಂದು ಸುಬ್ಬಣ್ಣರವರ ಮೇಲೆ ಅಬಕಾರಿ ಕಾಯಿದೆಯ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.