ಅಂತಾರಾಷ್ಟ್ರೀಯ ಜಾಂಬೂರಿ 2023 ರಲ್ಲಿ ಭಾಗವಹಿಸಲು ಸೌತ್ ಕೊರಿಯಾಕ್ಕೆ ತೆರಳಿದ ಸುಳ್ಯ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು

0

ಸೌತ್ ಕೊರಿಯಾದಲ್ಲಿ ಅಗಸ್ಟ್ 01 ರಿಂದ ಅಗಸ್ಟ್ 12 ರ ವರೆಗೆ ” ಡ್ರಾ ಯುವರ್ ಡ್ರೀಮ್ ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ 25 ನೇ ಅಂತಾರಾಷ್ಟ್ರೀಯ ಜಾಂಬೂರಿ , 2023 ರಲ್ಲಿ ಭಾರತದ ಪ್ರತಿನಿಧಿಯಾಗಿ ಸುಳ್ಯ ತಾಲೂಕಿನ ಕು. ಅಶ್ವಿನಿ ಯಸ್ ಗೈಡ್ಸ್ ವಿಭಾಗದಿಂದ ತೆರಳಿರುತ್ತಾರೆ . ಇವರು ರೋಟರಿ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುತ್ತಾರೆ . ಅಂತೆಯೇ ಸುಳ್ಯ ತಾಲೂಕಿನ ಮಾ. ಮನುಜ ನೇಹಿಗ ಅವರು ಮೂಡಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದು ಸ್ಕೌಟ್ಸ್ ವಿಭಾಗದಿಂದ ಅಂತರರಾಷ್ಟ್ರೀಯ ಜಾಂಬೂರಿಗೆ ತೆರಳಿರುತ್ತಾರೆ .

ದಕ್ಷಿಣ ಕನ್ನಡದಿಂದ ಒಟ್ಟು 28 ಸ್ಕೌಟ್ಸ್, 18 ಗೈಡ್ಸ್ , 7 ಐ.ಎಸ್.ಟಿ ಹಾಗೂ 5 ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ . ದಿನಾಂಕ 31.07.2023 ರಂದು ಮಂಗಳೂರು – ಬೆಂಗಳೂರು – ಹಾಂಗ್ ಕಾಂಗ್ ಮಾರ್ಗವಾಗಿ ಸೌತ್ ಕೊರಿಯಾಕ್ಕೆ ತೆರಳಿರುತ್ತಾರೆ .