ಮಳೆ‌ ರಜೆ‌ ಸರಿದೂಗಿಸಲು ಶನಿವಾರ ಪೂರ್ಣ ದಿನ ಶಾಲೆ ನಡೆಸುವ ಆದೇಶ ಹಿಂಪಡೆದ ಸುಳ್ಯ ಶಿಕ್ಷಣಾಧಿಕಾರಿ ಕಚೇರಿ

0

ಮಳೆ ಕಾರಣ ನೀಡಲಾಗಿದ್ದ ರಜೆ ಸರಿದೂಗಿಸಲು ಸುಳ್ಯ‌bಕ್ಷೇತ್ರ ಶಿಕ್ಷಣಾಧಿಕಾರಿಗಳು ಶನಿವಾರ ಪೂರ್ತಿ ದಿನ ಶಾಲೆ ನಡೆಸುವ ಕುರಿತು ಹೊರಡಿಸಿರುವ ಆದೇಶ ಹಿಂಪಡೆಯಲಾಗಿದೆ ಎಂದು‌ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ತಿಳಿಸಿದ್ದಾರೆ.

ಮಳೆ‌ಯ‌ ಸಂದರ್ಭದಲ್ಲಿ ಜಿಲ್ಲಾ ಹಂತದಿಂದ ರಜೆ ನೀಡಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗುವ ಸಂದರ್ಭಗಳು ಇರುವುದರಿಂದ ಮಳೆ ಸಂದರ್ಭದಲ್ಲಿ ನೀಡಿರುವ ರಜೆಯನ್ನು ತರಗತಿ ನಡೆಸಿ ಸರಿದೂಗಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಂತದ ಆದೇಶ ಅನುಸಾರ ಕ್ರಮ‌ಕೈಗೊಳ್ಳಲಾಗುವುದು. ಆದುದರಿಂದ ದಿನಾಂಕ 5-8-2023ರಿಂದ ಪೂರ್ಣ ದಿನ ತರಗತಿ ನಡೆಸುವಂತೆ ಸೂಚಿಸಿದ ಆದೇಶವನ್ನು ಹಿಂಪಡೆಯಲಾಗಿದೆ ಎಂದು‌ಅವರು ತಿಳಿಸಿದ್ದಾರೆ.