ಸರಕಾರಿ ಪ್ರೌಢಶಾಲೆ ಯೇನೆಕಲ್ಲು ಇಲ್ಲಿ ಆ.2 ರಂದು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಕಾರ್ಗಿಲ್ ದಿನಾಚರಣೆ ನಡೆಯಿತು.
















ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಫಿಲಿಪ್ ಪಿ.ಟಿ, ಡಿ.ಆರ್ ರಾಧಾಕೃಷ್ಣ, ತೇಜಕುಮಾರ್ ಕೊಂದಾಳ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಮೋಹನ್ ದಾಸ್ ಇವರು ಸನ್ಮಾನಿತರ ಪರಿಚಯ ಮಾಡಿದರು. ಅಶೋಕ್ ಮೂಲೆಮಜಲು ಸ್ವಾಗತಿಸಿ, ಖಜಾಂಜಿ ಚಂದ್ರಶೇಖರ ಪಾನತ್ತಿಲ ಧನ್ಯವಾದ ಸಮರ್ಪಿಸಿದರು. ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು.









