ಡಾ. ಕುರುಂಜಿಯವರ 10ನೇ ಪುಣ್ಯಸ್ಮರಣೆ

0

ಕೆ.ವಿ.ಜಿ. ಪುತ್ಥಳಿಗೆ ಪುಷ್ಪನಮನ

ಡಾ‌ ಕೆ.ವಿ.ಜಿ.ಯವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರ ಆತ್ಮಕ್ಕೆ ಗೌರವ ಅರ್ಪಿಸೋಣ – ಡಾ. ಕೆ.ವಿ. ಚಿದಾನಂದ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಸ್ಥಾಪಕಾಧ್ಯಕ್ಷ ಡಾ.‌ಕುರುಂಜಿ ವೆಂಕಟ್ರಮಣ ಗೌಡರ 10ನೇ ಪುಣ್ಯತಿಥಿಯ ಅಂಗವಾಗಿ ಕೆ.ವಿ.ಜಿ. ಕ್ಯಾಂಪಸ್ ನಲ್ಲಿರುವ ಅವರ ಪುತ್ಥಳಿಗೆ ಪುಷ್ಪಾರ್ಚನೆ ಹಾಗೂ ಸಂಸ್ಮರಣೆ ಇಂದು ಪೂರ್ವಾಹ್ನ ನಡೆಸಲಾಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಮಾತನಾಡಿ ” ಸುಳ್ಯ ಇಂದು ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡಲು ಡಾ. ಕುರುಂಜಿಯವರು ಕಾರಣ. ಅವರ ಧ್ಯೇಯದಂತೆ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆಯುವ ಮೂಲಕ ರೋಗಿಗಳಿಗೆ ಮಿತದರದಲ್ಲಿ ಚಿಕಿತ್ಸೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಸೋಣಂಗೇರಿಯಲ್ಲಿ ಈಗಾಗಲೇ ಸುಸಜ್ಜಿತ ಕಟ್ಟಡ ಎದ್ದು ನಿಂತಿದೆ. ಇಲ್ಲಿ ನರ್ಸಿಂಗ್ ಕಾಲೇಜು ಮಾಡುವ ಉದ್ದೇಶವಿದೆ. ಮತ್ತು ಇತರ ಎಲ್ಲ ರೀತಿಯ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ” ಎಂದು ಹೇಳಿದರು.


ಸುಳ್ಯ ನಗರ ಪಂಚಾಯತ್ ಮಾಜಿ‌ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ ಡಾ. ಕುರುಂಜಿಯವರಿಂದ ಸುಳ್ಯ ಇಂದು ಇಷ್ಟೊಂದು ಬೆಳೆದಿದೆ. ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಸ್ವಚ್ಚ ಸುಳ್ಯದ ಪರಿಕಲ್ಪನೆಯಲ್ಲಿ ನಮ್ಮ ಪಂಚಾಯತ್ ದಿಟ್ಟ ಹೆಜ್ಜೆ ಇಟ್ಟಿದೆ. ದಶಕಗಳಿಂದ ಬಾಧಿಸುತ್ತಿದ್ದ ಕಸವಿಲೇವಾರಿಗೆ ಈಗ ಮುಕ್ತಿ ದೊರಕಿದೆ. ಮುಂದೆ ಕುಡಿಯುವ ನೀರಿನ ಯೋಜನೆಯೂ ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿದೆ” ಎಂದರು. ಕೆ.ವಿ.ಜಿ. ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಣರಾಗಿದ್ದ ಡಾ.ಎನ್.ಎ.ಜ್ಞಾನೇಶ್ ನುಡಿನಮನ ಸಲ್ಲಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.,
ಎ.ಒ.ಎಲ್.ಇ‌. ಉಪಾಧ್ಯಕ್ಷೆ ಶ್ರೀಮತಿ ಶೋಭ ಚಿದಾನಂದ,
ಜೊತೆ ಕಾರ್ಯದರ್ಶಿ ಕೆ.ವಿ. ಹೇಮನಾಥ್, ಶ್ರೀಮತಿ ಪಾರ್ವತಿ ಅಕ್ಷಯ್,
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಗೌಡ ಯುವ ಸೇವಾ ಸಂಘದ ಅಧ್ಯಕ್ಷ, ಚಂದ್ರಾಕೋಲ್ಚಾರ್, ಸುಳ್ಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸುಳ್ಯಹಬ್ಬ ಸಮಿತಿ, ಸುಳ್ಯ ಪ್ರೆಸ್ ಕ್ಲಬ್, ಜೇಸಿಐ ಸುಳ್ಯ ಈ ಎಲ್ಲಾ ಸಂಸ್ಥೆಗಳ ಪದಾಧಿಕಾರಿಗಳು, ಕೆ.ವಿ.ಜಿ. ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಡಾ. ಕೆ.ವಿ.ಜಿ. ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಕೆ.ವಿ.ಜಿ. ಸ್ಥಾಪಕರ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ, ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಂ.ಸಿ. ಪ್ರಾಂಶುಪಾಲರಾ ರುದ್ರಕುಮಾರ್ ವಂದಿಸಿದರು.