ಸುಬ್ರಹ್ಮಣ್ಯ : ಮದ್ಯ ಮಾರಾಟದ ಆರೋಪದ ಹಿನ್ನಲೆಯಲ್ಲಿ ಹೊಟೇಲ್ ಗೆ ಪೊಲೀಸ್ ದಾಳಿ

0

ಸುಬ್ರಹ್ಮಣ್ಯದ ಇಂಜಾಡಿಯ ಎಂಬಲ್ಲಿ ಇರುವ ಹೋಟೆಲೊಂದಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ, ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ದಾಳಿ ಮಾಡಿದ ಘಟನೆ ವರದಿಯಾಗಿದೆ.

ಎಸ್ ಐ ಮಂಜುನಾಥ್ ಹಾಗೂ ಸಿಬ್ಬಂದಿಗಳು ಆ.13 ರಂದು ಗ್ರೀನ್ ಪಾರ್ಮ್ ಹೋಟೆಲ್ ಗೆ ಧಾಳಿ ನಡೆಸಿ ತನಿಖೆ ನಡೆಸಿದ್ದಾರೆ.

ತನಿಖೆ ಸಂದರ್ಭದಲ್ಲಿ ಯಾವುದೇ ಮದ್ಯ ಮಾರಾಟ ಹಾಗೂ ಅದಕ್ಕೆ ಸಂಬಂಧಿಸಿದ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.