ಪಂಜ: ಅಖಂಡ ಭಾರತ ಸಂಕಲ್ಪ ದಿನಬೃಹತ್ ಪಂಜಿನ ಮೆರವಣಿಗೆ

0


ಹಿಂದು ಜಾಗರಣಾ ವೇದಿಕೆ ಪಂಜ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ,ಬೃಹತ್ ಪಂಜಿನ ಮೆರವಣಿಗೆ ಆ.14 ರಂದು ಪಂಜದಲ್ಲಿ ಜರುಗಿತು.


ಪಂಜ ದೀನ್ ದಯಾಳ್ ಸಂಕೀರ್ಣದ ಬಳಿಯಿಂದ ಬೃಹತ್ ಪಂಜಿನ ಮೆರವಣಿಗೆಯು ಪಂಜ ಸಿ.ಎ. ಬ್ಯಾಂಕ್ ಬಳಿ ತನಕ ಸಾಗಿ ಬಂತು. ಹಿರಿಯ ವೈದ್ಯ ಡಾ.ರಾಮಯ್ಯ ಭಟ್ ಮೆರವಣಿಗೆಗೆ ಚಾಲನೆ ನೀಡಿದರು. ಸವಣೂರು ಹಿಂ.ಜಾ.ವೇ.ಗೌರವಾಧ್ಯಕ್ಷ ಗಿರೀಶ್ ಶಂಕರ್ ಸುಲಾಯ ದಿಕ್ಸೂಚಿ ಭಾಷಣ ಮಾಡಿ
“ಜಗತ್ತಿನಲ್ಲಿ ವಿಶೇಷ ಶ್ರೇಷ್ಠ ಮತ್ತು ದೈವ ದೇವರುಗಳ ಶಕ್ತಿಯಿಂದ ಕೂಡಿರುವ ಪುಣ್ಯದ ನೆಲ ಭಾರತ.
ಮತ್ತೆ ಭಾರತವನ್ನು ವಿಭಜಿಸಲು ಎಂದು ಬಿಡ ಬಾರದು. ವಿಭಜನೆಯಾದ ಹೋಗಿರುವ ಭಾಗವನ್ನು ಮತ್ತೆ ಸೇರಿಸುವ. ನಮ್ಮ ಸಂಸ್ಕಾರ ‌ಸಂಸ್ಕೃತಿಯನ್ನು ಅಧ್ಯಯನ ನಡೆಸಿ ಮೈಗೂಡಿಸಿ ಕೊಳ್ಳಬೇಕು. ಈ ಕುರಿತು ಮಕ್ಕಳಿಗೂ
ಮಾರ್ಗದರ್ಶನ ನೀಡ ಬೇಕು. ನಮ್ಮ ಧರ್ಮ ಪವಿತ್ರ ಸದೃಢವಾಗಿರವುದರಿಂದ ಧರ್ಮದ ಮೇಲೆ ದಾಳಿಯಾದರು ಅದಕ್ಕೆ ತೊಂದರೆ ಆಗುವುದಿಲ್ಲ.
ಎಲ್ಲರೂ ದೇಶದ ಪ್ರೇಮದಿಂದ ದೇಶ ಸೇವೆಯಲ್ಲಿ ತೊಡಗಿಸಿ ಕೊಳ್ಳುವ.”ಎಂದು ಹೇಳಿದರು.


. ಕಾರ್ಯಕ್ರಮದಲ್ಲಿ ಹಿಂದು ಜಾಗರಣಾ ವೇದಿಕೆಯ ಗೌರವಾಧ್ಯಕ್ಷ ಲೋಕೇಶ್ ಬರೆಮೇಲು ಸ್ವಾಗತಿಸಿದರು. ಹಿಂದು ಜಾಗರಣಾ ವೇದಿಕೆ ಉಪಾಧ್ಯಕ್ಷ ದಯಾನಂದ ಮೇಲ್ಮನೆ ಸಂಕಲ್ಪ ಪ್ರತಿಜ್ಞೆ ನಿರ್ವಹಿಸಿದರು. ಪ್ರಕಾಶ್ ಜಾಕೆ ನಿರೂಪಿಸಿದರು.ಹಿಂದು ಜಾಗರಣಾ ವೇದಿಕೆಯ ಅಧ್ಯಕ್ಷ ಕಿರಣ್ ನೆಕ್ಕಿಲ ವಂದಿಸಿದರು.