ಪೈಚಾರ್ ಬದ್ರಿಯಾ ಜುಮಾ ಮಸೀದಿ ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ವತಿಯಿಂದ 76 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಧ್ವಜಾರೋಹಣವನ್ನು ಬದ್ರಿಯಾ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಟಿ ಎ.ನೆರವೇರಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸಂದೇಶ ಭಾಷಣವನ್ನು ಬಿ ಜೆ ಎಮ್ ಖತಿಬಾರದ ಶಮೀರ್ ನಹಿಮಿ ಉಸ್ತಾದ್ ನೀಡಿದರು.ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.ಹಾಗೂ ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಖುವ್ವತ್ತುಲ್ ಇಸ್ಲಾಂ ಮದರಸ ವಿಧ್ಯಾರ್ಥಿ ಖದೀಜತ್ತುಲ್ ಸಲ್ವಾ ಹಾಗೂ ಸದರ್ ಉಸ್ತಾದ್ ಇವರಿಗೆ ರೇಂಜ್ ನವರು ನೀಡಿದ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್,ಖುವ್ವತ್ತುಲ್ ಇಸ್ಲಾಂ ಮದರಸ ಸದರ್ ಉಸ್ತಾದ್ ಮುಯ್ಯದ್ದೀನ್ ಲತೀಫಿ, ಮುಅಲ್ಲಿಮರಾದ ಹನೀಫ್ ಮುಸ್ಲಿಯಾರ್,

ಕಮಿಟಿ ಪ್ರಧಾನ ಕಾರ್ಯದರ್ಶಿ ಹನೀಫ್ ಪಿಕೆ,ಕಾರ್ಯದರ್ಶಿ ಇಸಾಕ್ ಕೆಪಿ, ಮದರಸ ಉಸ್ತುವಾರಿ ರಝಾಕ್ ಅರ್ತಾಜೆ, ಅಲ್ ಅಮೀನ್ ಯೂತ್ ‌ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಆಶ್ರಫ್ ಪೈಚಾರ್,

ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷರಾದ ಬಶೀರ್ ಆರ್ ಬಿ,ಅಲ್ ಅಮೀನ್ ಯೂತ್ ‌ಸೆಂಟರ್ ಮಾಜಿ ಅಧ್ಯಕ್ಷರಾದ ಅಬೂಸಾಲಿ ಕೆಪಿ,ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಲತೀಫ್ ಟಿಎ, ಬದ್ರಿಯ ಜುಮಾ ಮಸೀದಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು,ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಸದಸ್ಯರುಗಳು, ಜಮಾಅತ್ ಸದಸ್ಯರು, ವಿಧ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.