ಜಟ್ಟಿಪಳ್ಳ ‌ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಭಾರತದ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಮತ್ತು ಬುಸ್ತಾನುಲ್ ಉಲೂಂ ಮದರಸ ವಿಧ್ಯಾರ್ಥಿಗಳು ಮತ್ತು ಊರವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಎಸ್ ಎ ಎಸ್ ರವರು ಧ್ವಜಾರೋಹಣಗೈದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬುಸ್ತಾನುಲ್ ಉಲೂಂ ಮದರಸ ಸದರ್ ಉಸ್ತಾದ್ ಬದುರುಲ್ ಮನೀರ್ ಹನೀಪಿ ಪ್ರಾಸ್ತಾವಿಕವಾಗಿ ಮಾತನಾಡಿ ದುವಾ ನಿರ್ವಹಿಸಿದರು.
ಸಮಿತಿ ಗೌರವಧ್ಯಕ್ಷ ಅಬೂಭಕ್ಕರ್ ಕೆ ಎ,ಮಾಜಿ ಅಧ್ಯಕ್ಷರಾದ ವಿ.ಕೆ ಅಬೂಭಕ್ಕರ್ ಹಾಜಿ,ಕೆ.ಎಂ ಮೂಸ,ರಶೀದ್ ಶರೀಫ್ ಜಟ್ಟಿಪ್ಪಳ್ಳ, ಸಮಿತಿ ಉಪಾಧ್ಯಕ್ಷ ಅಮೀರ್,ಇಸ್ಮಾಯಿಲ್ ಎಸ್ ಎಂ, ಮೊಯಿದ್ದೀನ್ ಎಸ್ ಎಂ, ಹಾಗೂ ಸಂಸ್ಥೆಯ ಹಿತೈಷಿಗಳು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಸ್ವಾಗತಿಸಿ ಸಹ ಅಧ್ಯಾಪಕರಾದ ಶಾಹುಲ್ ಹಮೀದ್ ಇಶಾಮಿ ಕಾರ್ಯಕ್ರಮ ನಿರೂಪಿಸಿದರು.