ಅಡ್ಪಂಗಾಯ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಅಜ್ಜಾವರದ ಅಡ್ಪಂಗಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಬಿ. ಅಶ್ರಫ್ ಸಹದಿ‌ ನೆರವೇರಿಸಿದರು.

ಅಜ್ಜಾವರ ಗ್ರಾಮ ಪಂಚಾಯತ್ ನಿಯೋಜಿತ ಅಧ್ಯಕ್ಷೆ ಬೇಬಿ‌ ಕಲ್ತಡ್ಕ, ಉಪಾಧ್ಯಕ್ಷೆ ಲೀಲಾ ಮನಮೋಹನ್, ಸದಸ್ಯ ರಾಹುಲ್ ಅಡ್ಪಂಗಾಯ ಹಾಗೂ ಊರವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ‌ ಮುಖ್ಯ ಶಿಕ್ಷಕಿ ಧನಲಕ್ಷ್ಮಿ‌ ಕುದ್ಪಾಜೆ ಸ್ವಾಗತಿಸಿದರು.