ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ವಿಶೇಷ ಮಕ್ಕಳ ಕಾಳಜಿ ಇದು ದೇವತಾ ಸೇವೆ: ಡಾ ಲೀಲಾಧರ್

ಸ್ವಾತಂತ್ರ್ಯದ ಕಲ್ಪನೆಗೆ ಉದಾಹರಣೆ ಸಾಂದೀಪ್ ಶಾಲೆ: ಡಾ.ವೆಂಕಟಕೃಷ್ಣ

ಎಂ ಬಿ ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.


ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಧ್ವಜಾರೋಹಣ ಮಾಡಿದರು.

ಸಾಂದೀಪ್ ವಿಶೇಷ ಮಕ್ಕಳ ಶಾಲೆಯನ್ನು ನಡೆಸುವುದು ಅದರಲ್ಲಿ ವಿಶೇಷವಾಗಿ ವಿಶೇಷ ಮಕ್ಕಳಿಗೆ ವಿದ್ಯೆಯನ್ನು ಕಲಿಸುದರೊಂದಿದೆ ಮಕ್ಕಳ ಬಗ್ಗೆ ಬಗ್ಗೆ ವಿಶೇಷ ಕಾಳಜಿವಹಿಸಿ ಮಕ್ಕಳನ್ನು ಸಮಾಜಮುಖಿಯಾಗಿ ತರುವಲ್ಲಿ ಪ್ರಯತ್ನ ಪಡುತ್ತಿರುವ ಎಂ ಬಿ ಸದಾಶಿವ ದಂಪತಿಗಳ ಸೇವೆ ಅದು ದೇವತಾ ಸೇವಯೆಂದು ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾಧರ್ ಡಿ.ವಿ ಯವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಇನ್ನೋರ್ವ ಮುಖ್ಯ ಅತಿಥಿ ಡಾ.ವೆಂಕಟಕೃಷ್ಣ ಮಾತನಾಡಿ ವಿಶೇಷ ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರನ್ನು ಸಮಾಜದ ಮುಂದೆ ತಂದು ಅವರ ಬೆಳವಣಿಗೆಯಲ್ಲಿ ಸಹಕಾರಿಯಾಗುವುದೇ ನಿಜವಾದ ಸ್ವಾತಂತ್ರ್ಯ ವಿಶೇಷ ಮಕ್ಕಳು ಸಮಾಜದ ಮಂದೆ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸಿದಾಗ ಸ್ವಾತಂತ್ರ್ಯದ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯಂತ ಹರ್ಲಡ್ಕ, ಪ್ರಧಾನ ಕಾರ್ಯದರ್ಶಿ ಗಣೇಶ್, ಎಂ ಬಿ ಫೌಂಡೇಶನ್ ನ ಸಲಹೆಗಾರರಾದ ಲ.ರಂಗನಾಥ್,ನೇತ್ರಾವತಿ ಪಡ್ಡಂಬೈಲು,ಕರ್ನಾಟಕ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಾರೂಕ್ ಪೈಚಾರ್,ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಅಧ್ಯಕ್ಷತೆ ವಹಿಸಿದ್ದರು.
ಶಾಲೆ ಸಂಚಾಲಕಿ ಹರಿಣಿ ಸದಾಶಿವ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ,ಎಂ ಬಿ ಫೌಂಡೇಶನ್ ಕೋಶಾಧಿಕಾರಿ ಪುಷ್ಪಲತಾ ರಾಧಾಕೃಷ್ಣ ಮಾಣಿಬೆಟ್ಟು,ಟ್ರಸ್ಟಿ ಸೂರಯ್ಯ ಸುಂತೋಡು ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಸಿಬ್ಬಂದಿ ಪುನಿತ್ ಪ್ರಾರ್ಥಿಸಿದರು.
ಸಾಂದೀಪ್ ಶಾಲೆಯ ಶಿಕ್ಷರರು ಸಹಕರಿಸಿದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಡಾ.ಲೀಲಾಧರ್ ರವರ ಷರಾ ಪ್ರಕಾಶನ ಇದರ ವತಿಯಿಂದ ಸಾಂದೀಪ್ ಶಾಲೆಯ ವಿಶೇಷ ಮಕ್ಕಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.