ನೆಲ್ಲೂರು ಕೆಮ್ರಾಜೆ : ಅಧಿಕಾರ ವಹಿಸಿಕೊಂಡ‌ ನೂತ‌ನ ಅಧ್ಯಕ್ಷ ಉಪಾಧ್ಯಕ್ಷರು

0

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಗೆ ಮುಂದಿನ‌ ಎರಡೂವರೆ ವರ್ಷಕ್ಕೆ‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಧನಂಜಯ ಕುಮಾರ್ ಕೋಟೆಮಲೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ವಂದನಾ ಹೊಸ್ತೋಟರವರು ಇಂದು‌ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪಿ.ಡಿ.ಓ.‌ಲೀಲಾವತಿ, ಗ್ರಾಮ ಆಡಳಿತಾಧಿಕಾರಿ ಮಾರುತಿ ಕಾಂಬ್ಲೆ, ಗ್ರಾಮ ಕರಣಿಕ ನಾರಾಯಣ, ಪಂಚಾಯತ್ ಸದಸ್ಯರು ಗಳಾದ ವೇಣುಗೋಪಾಲ ತುಂಬೆತ್ತಡ್ಕ, ವನಿತಾ ಬೊಳ್ಳಾಜೆ, ರಾಮಚಂದ್ರ ಪ್ರಭು, ಭಾಗೀರಥಿ ಎರ್ಮೆಟ್ಟಿ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ‌