ಆಲೆಟ್ಟಿ ಪಂಚಾಯತ್ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

0

ಅಭಿನಂದಿಸಿದ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು, ಸಿಬ್ಬಂದಿ ವರ್ಗದವರು

ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದು ಮುಂದಿನ ಎರಡುವರೆ ವರ್ಷಗಳ ಅವಧಿಗೆ ಸಾಮಾನ್ಯ ವರ್ಗ ಎ ಮಹಿಳೆ ವೀಣಾಕುಮಾರಿ ಆಲೆಟ್ಟಿ ಮತ್ತು ಉಪಾಧ್ಯಕ್ಷತೆಗೆ ಸಾಮಾನ್ಯ ವರ್ಗದಿಂದ ಕೆ.ಕಮಲ ನಾಗಪಟ್ಟಣ ರವರು ಆಯ್ಕೆಯಾಗಿದ್ದು ಅಧಿಕಾರ ಸ್ವೀಕಾರವು ಆ.19 ರಂದು ನಡೆಯಿತು.

ಹಿಂದಿನ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಪುಷ್ಪಾವತಿ ಕುಡೆಕಲ್ಲು ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿನೇಶ್ ಕಣಕ್ಕೂರು ನೂತನ ಅಧ್ಯಕ್ಷೆ ವೀಣಾಕುಮಾರಿ ಮತ್ತು ಉಪಾಧ್ಯಕ್ಷೆ ಕೆ.ಕಮಲ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು, ಪಂಚಾಯತ್ ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಪುಷ್ಪ ಗುಚ್ಛ ನೀಡಿ
ಅಭಿನಂದಿಸಿದರು.