ನಿವೃತ್ತ ಮುಖ್ಯ ಶಿಕ್ಷಕ ಜಯರಾಮ ಅಡ್ತಲೆ ನಿಧನ

0

ನಿವೃತ್ತ ಮುಖ್ಯ ಶಿಕ್ಷಕ ಜಯರಾಮ ಅಡ್ತಲೆಯವರು ಇಂದು ಸಂಜೆ ಬೆಂಗಳೂರಿನ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕೆಲವು ವರ್ಷದ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಆ ಬಳಿಕ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಂಡು ವಿಶ್ರಾಂತಿಯಲ್ಲಿದ್ದರು. ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿರುವ ಪುತ್ರಿ ದೀಪಿಕಾ ಅಡ್ತಲೆಯವರ ಮನೆಗೆ ತೆರಳಿ ಅಲ್ಲಿದ್ದರು. ಇಂದು ಸಂಜೆ ಅಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.

ಮೃತದೇಹವನ್ನು ಅಡ್ತಲೆಗೆ ತರಲಾಗುತ್ತಿದ್ದು ನಾಳೆ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ಪತ್ನಿ ಯಶೋದಾ, ಪುತ್ರಿ ದೀಪಿಕಾ ಅಡ್ತಲೆ, ಪುತ್ರರಾದ ಪ್ರದೀಪ್ ಅಡ್ತಲೆ, ಸಂದೀಪ್ ಅಡ್ತಲೆ , ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.