ಜಾಲ್ಸೂರು: ಬೀಡಿ ಬ್ರಾಂಚ್ ನಿಂದ ಹದಿನೈದು ಸಾವಿರ ಮೌಲ್ಯದ ಬೀಡಿ ಕಳವು

0

ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸ್ ಹೊರಠಾಣೆ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ

ಬೀಡಿ ಬ್ರಾಂಚ್ ನಿಂದ ಹದಿನೈದು ಸಾವಿರ ಮೌಲ್ಯದ ಬೀಡಿ ಕಳವಾಗಿರುವ ಘಟನೆ ಜಾಲ್ಸೂರಿನಲ್ಲಿ ಆ.20ರಂದು ರಾತ್ರಿ ಸಂಭವಿಸಿದೆ.

ಜಾಲ್ಸೂರಿನ ಗೋಳಿಕಟ್ಟೆ ಸಮೀಪವಿರುವ ಪ್ರಮೀತ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶೇಷಪ್ಪ ರೈ ದುಗಲಡ್ಕ ಅವರ ಬೀಡಿ ಬ್ರಾಂಚ್ ನಿಂದ ಆ.20ರಂದು ರಾತ್ರಿ ಬೀಡಿ ಕಳವಾಗಿದ್ದು, ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟರ್ ಮುರಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಹದಿನೈದು ಸಾವಿರ ಮೌಲ್ಯದ ಮೂವತ್ತು ಸಾವಿರ ಬೀಡಿ ಕಳವುಗೈದಿರುವುದಾಗಿ ತಿಳಿದುಬಂದಿದೆ.
ಮರುದಿನ ಬೆಳಿಗ್ಗೆ ಶೇಷಪ್ಪ ರೈ ಅವರು ಅಂಗಡಿಗೆ ಬಂದಾಗ ವಿಷಯ ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ.
ಜಾಲ್ಸೂರು ಪರಿಸರದಲ್ಲಿ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಜಾಲ್ಸೂರು ಪೇಟೆಯಲ್ಲಿ ಸಂಪಾಜೆಯಲ್ಲಿರುವಂತೆ ಪೊಲೀಸ್ ಹೊರಠಾಣೆ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.