ಸೋಣಂಗೇರಿ : ಮಹಿಳೆಗೆ ಬೈಕ್ ಢಿಕ್ಕಿ, ತಲೆಗೆ ಗಂಭೀರ ಗಾಯ

0

ಮಹಿಳೆಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಆ.26ರಂದು ಬೆಳಿಗ್ಗೆ ಸಂಭವಿಸಿದೆ.

ಸೋಣಂಗೇರಿಯ ಕುಕ್ಕಂದೂರು ನಿವಾಸಿ ಸತ್ಯಭಾಮ ಎಂಬವರು ದುಗಲಡ್ಕದ ಕೆ.ಎಫ್.ಡಿ.ಸಿ. ರಬ್ಬರ್ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದು, ಬೆಳಿಗ್ಗೆ ಸೋಣಂಗೇರಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದರೆನ್ನಲಾಗಿದೆ. ಬಸ್ ಬಂದು ಸೋಣಂಗೇರಿ ಜಂಕ್ಷನ್ ನ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಹೋಗಿ ನಿಂತ ವೇಳೆ ಮಹಿಳೆ ಬಸ್ ಹತ್ತಲು ಓಡಿದ ಸಂದರ್ಭದಲ್ಲಿ ಸುಳ್ಯದಿಂದ ಬೆಳ್ಳಾರೆಗೆ ತೆರಳುತ್ತಿದ್ದ ನಾಗರಾಜ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.


ಢಿಕ್ಕಿ ಹೊಡೆದ ರಭಸಕ್ಕೆ ಸತ್ಯಭಾಮ ಅವರು ರಸ್ತೆಗೆ ಎಸೆಯಲ್ಪಟ್ಟು, ತಲೆ ಹಾಗೂ ಕೈಗೆ ಗಾಯಗೊಂಡರು. ತಲೆಗೆ ಗಂಭೀರವಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದು, ಸ್ಥಳೀಯರು ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು‌. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.