ಎಲಿಮಲೆಯ ಎತ್ತಿನಹೊಳೆ‌ ಬಳಿ‌ ಅನಾಥವಾದ ದ್ವಿಚಕ್ರ ವಾಹನ

0

ಎಲಿಮಲೆಯ ಬಳಿಯ‌‌ ಎತ್ತಿನಹೊಳೆ ಎಂಬಲ್ಲಿ ದ್ವಿ ಚಕ್ರ ವಾಹನವೊಂದು‌ ಅನಾಥವಾಗಿ ನಿಂತಿದ್ದು, ಕಾಡುಬಳ್ಳಿಗಳು ಮುತ್ತಿಕ್ಕಿದೆ.

ಸುಮಾರು ಐದಾರು ತಿಂಗಳ ಹಿಂದೆ‌ ಎತ್ತಿನಹೊಳೆಯಿಂದ‌ ಸ್ವಲ್ಪ ಮುಂದೆ ಇರುವ ಕಂಪೌಂಡ್ ಬಳಿ‌ ದ್ವಿಚಕ್ರ ವಾಹನ ಹೋರೋ ಹೋಂಡಾ ಕಂಪೆನಿಯ ಸ್ಪೆಂಡ್ಲರ್ ಬೈಕ್ (KA 30 H 6831)
ನ್ನು ನಿಲ್ಲಿಸಲಾಗಿದೆ. ಹೆಲ್ಮೆಟ್ ಅದರಲ್ಲಿ ಸಿಕ್ಕಿಸಲಾಗಿದ್ದು, ಬೈಕ್ ಗೆ ಕಾಡು ಬಳ್ಳಿಗಳು ಆವರಿಸಿಕೊಂಡಿದೆ. ಬೈಕ್ ನ್ನು ಯಾರಾದರೂ ಕದ್ದು ತಂದು‌ ಇಲ್ಲಿ ಬಿಟ್ಟು ಹೋಗಿದ್ದಾರೋ ಅಥವಾ ಇನ್ನಾವುದೇ ಕಾರಣಗಳಿಂದ ಬಿಟ್ಟು ಹೋಗಿದ್ದಾರೋ ಎಂಬುದು ತಿಳಿದು‌ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಹರಿಸಬೇಕಿದೆ.