ಸಾಂದೀಪ್ ಶಾಲೆ ಮತ್ತು ಮಹಿಳಾ ಸಮಾಜದ ವತಿಯಿಂದ ದಿ| ಎಂ.ಬಿ. ದೇವಕಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಮಹಿಳಾ ಸಮಾಜ ಸ್ಥಾಪಕಾಧ್ಯಕ್ಷೆ ಸುಳ್ಯದ ಹಿರಿಯ ಉದ್ಯಮಿ ಸಾಂದೀಪ್ ವಿಶೇಷ ಮಕ್ಕಳ ಶಾಲೆ ಸ್ಥಾಪಕ ಎಂ.ಬಿ. ಸದಾಶಿವ ರವರ ಮಾತೃಶ್ರೀ ದಿ|ಎಂ ಬಿ ದೇವಕಿಯವರ ಸ್ಮರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಮಹಿಳಾ ಸಮಾಜ ಹಾಗೂ ಎಂ ಬಿ ಫೌಂಡೇಶನ್ ನ ಸಾಂದೀಪ್ ವಿಶೇಷ ಮಕ್ಕಳ ಶಾಲೆ ವತಿಯಿಂದ ನಡೆಯಿತು.


ಕಾರ್ಯಕ್ರಮದಲ್ಲಿ ದಿ| ಎಂ ಬಿ ದೇವಕಿಯವರ ಬಾಲ್ಯ ಸ್ನೇಹಿತೆ ಶ್ರಿಮತಿ ಪದ್ಮಿನಿ ಸುಬ್ರಾಯ, ಹಿರಿಯರಾದ ಶ್ರೀಮತಿ ನೇತ್ರಾವತಿ ಪಡ್ಡಂಬೈಲು, ಶ್ರೀಮತಿ ಶಿಲಾವತಿ ಸೀತಾರಾಮ , ಗಾಂಧಿನಗರ ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಎ.ಜಿ ಭವಾನಿ, ಶ್ರೀಮತಿ ಹರಿಣಿ ಸದಾಶಿವ ಮೊದಲಾದವರು ನುಡಿನಮನ ಸಲ್ಲಿಸಿದರು.
ಎಂ ಬಿ ಫೌಂಡೇಶನ್ ಅಧ್ಯಕ್ಷ ದೇವಕಿಯವರ ಪುತ್ರ ಎಂ ಬಿ ಸದಾಶಿವ ಹಾಗೂ ಹರಿಣಿ ಸದಾಶಿವ ಸ್ವಾಗತಿಸಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು, ಕಾರ್ಯದರ್ಶಿ ಹೇಮಾ ಗೀರಿಶ್, ಕೋಶಾಧಿಕಾರಿ ರಾಧಮಣಿ ಬಿ.ಜಿ, ಸುಧಾ ಶ್ರೀಧರ್, ಯೋಗಿತ ಗೋಪಿನಾಥ್, ಆಶಿತಾಕೇಶವ್,ಲಕ್ಷ್ಮೀ ವಿ ಶೆಟ್ಟಿ, ಮಹಿಳಾ ಸಮಾಜದ ಸಿಬ್ಬಂದಿಗಳಾದ ದಿವ್ಯ, ವನಿತಾ, ಮಂಜುಳಾ, ಎಂ ಬಿ ಫೌಂಡೇಶನ್ ಟ್ರಸ್ಟಿ ಸೂರಯ್ಯ ಸೂಂತೋಡು, ರಘು ಸೋಮವಾರಪೇಟೆ, ಭಾರತಿ ಜಯಂತ ಗೌಡ ಕಾಳಂಮನೆ, ಸಾಂದೀಪ್ ಶಾಲೆ ಶಿಕ್ಷಕಿಯರಾದ ಸೌಮ್ಯ, ತೇಜಾವತಿ, ಸುಜಾತ, ವನಿತಾ, ಮೀನಾಕ್ಷಿ, ರಮ್ಲಾ, ವಿನಿತ್ ಮೊದಲಾದವರು ಉಪಸ್ಥಿತರಿದ್ದರು.


ಎಂ ಬಿ ಫೌಂಡೇಶನ್ ನ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದ ದೇವಕಿಯವರು ಅವರ ಜೀವನೂದ್ದಕ್ಕೂ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ಮಹಿಳೆ: ನೇತ್ರಾವತಿ ಪಡ್ಡಂಬೈಲು

ಯಾವುದೇ ರೀತಿಯ ಜಾತಿ ಭೇದ ಬಾವವಿಲ್ಲದೇ ಹಸಿದವರಿಗೆ ಅನ್ನ ನೀಡಿ ಅಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕಾಗಿ ಸುಳ್ಯವನ್ನು ಆಶ್ರಯಿಸಿದ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಿದ ಮಹಾವಿದ್ಯಾದಾನಿ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಪದ್ಮಿನಿ ಸುಬ್ರಾಯ

ಜೀವನದಲ್ಲಿ ಎಲ್ಲಾ ಘಟ್ಟವನ್ನು ಅನುಭವಿಸಿ ಸುಖ ಸಂಸಾರ್ ಜೀವನದಲ್ಲಿ ಸಾಗಿ ದೇವರ ಪಾದ ಸೇರಿದ ಅದೃಷ್ಟ ಮಹಿಳೆ ಸಮಾಜದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ನೀಡಿದ ಪ್ರೋತ್ಸಾಹ ಅದೂ ಇಂದಿಗೂ ನೆನಪೂ ಅವರು ಮಾಡಿದ ಸಮಾಜಮುಖಿ ಸೇವೆ ನಮಗೆ ಸ್ಪೂರ್ತಿ: ಶಿಲಾವತಿ ಸೀತಾರಾಮ

ನಾವು ವಿದ್ಯಾಭ್ಯಾಸಕ್ಕಾಗಿ ಸುಳ್ಯದ ಮಹಿಳಾ ಸಮಾಜಕ್ಕೆ ಬಂದಾಗ ನಮ್ಮಂತ ಹಲವಾರು ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿ ನಮಗೆ ವಿದ್ಯೆ ನಮ್ಮ ಜೀವನದ ಯಶಸ್ವಿನ ಮಾರ್ಗದರ್ಶಕರಾಗಿ ನಮ್ಮ ಕಷ್ಟ ಸುಖಗಳಿಗೆ ನಮ್ಮೊಂದಿಗೆ ಬೆರೆತು ಅನ್ನ, ನೀರು, ಆಶ್ರಯ ಕೊಟ್ಟ ಮಹಾತಾಯಿ ದೇವಕಿಯಮ್ಮ ಅವರಿಗೆ ದೇವರು ಚಿರಶಾಂತಿಯನ್ನು ಕರುಣಿಸಲಿ:
ಶಿಕ್ಷಕಿ ಭವಾನಿ