ಅನ್ಸಾರಿಯದಲ್ಲಿ ಉಮ್ರಾ ಯಾತ್ರಿಕರಿಗೆ ತರಬೇತಿ ಶಿಬಿರ

0


ಸುಳ್ಯ ಅನ್ಸಾರಿಯ ಎಜುಕೇಶನ್ ಸೆಂಟರ್ ನಲ್ಲಿ ಪವಿತ್ರ ಮಕ್ಕ ಮದೀನಾ ಯಾತ್ರೆ ಕೈಗೊಳ್ಳುವ ಉಮ್ರಾ ಯಾತ್ರಿಕರಿಗೆ ತರಬೇತಿ ಶಿಬಿರ ಕಾರ್ಯಕ್ರಮ ಪ್ಯಾನ್ಸಿ ಡಿಜಿಟಲ್ ಸರ್ವಿಸ್ ಸುಳ್ಯ ಮತ್ತು ಪ್ಲೈಗ್ಲೋಬಲ್ ಟ್ರಾವೇಲ್ಸ್ ವತಿಯಿಂದ ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.


ತರಬೇತಿ ಶಿಬಿರದ ಉದ್ಘಾಟನೆಯನ್ನು ಸಯ್ಯದ್ ತ್ವಾಹೀರ್ ತಂಙಳ್ ಸುಳ್ಯ ನೆರವೇರಿಸಿದರು.
ಅನ್ಸಾರಿಯ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್ ದುವಾಶಿರ್ವಚನ ನೀಡಿದರು.


ಉಮ್ರಾ ಯಾತ್ರಿಕರಿಗೆ ತರಬೇತಿಯನ್ನು ಇಲ್ಯಾಸ್ ಸಖಾಫಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯ ವ್ಯವಸ್ಥಾಪಕ ಉವೈಸ್,ಅಬ್ದುಲ್‌ ಖಾದರ್ ಪ್ಯಾನ್ಸಿ,ಮುಹ್ಯದ್ದೀನ್ ಮಾಸ್ಟರ್ ಪ್ಯಾನ್ಸಿ, ಸಿದ್ದೀಕ್ ಕಟ್ಟೆಕ್ಕಾರ್, ರಿಫಾಯಿ ಪ್ಯಾನ್ಸಿ, ಮೊಯ್ದಿನ್ ಶಾಝ್ ಟ್ರಾವೇಲ್ಸ್, ಮೊದಲಾದವರು ಉಪಸ್ಥಿತರಿದ್ದರು.
ಉಮ್ರಾ ಯಾತ್ರೆ ಸಂಯೋಜಕರಾದ ಅಶ್ರಫ್ ಪ್ಲೈಗ್ಲೋಬಲ್ ಟ್ರಾವೇಲ್ಸ್ ಹಾಗೂ ಪ್ಯಾನ್ಸಿ ಡಿಜಿಟಲ್ ಸರ್ವಿಸ್ ನ ಸಿರಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.