ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಸೆ. 10 ರಂದು ನಡೆಯಲಿರುವ ಪ್ರಥಮ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಆ.27 ರಂದು ಆಲೆಟ್ಟಿ ಸದಾಶಿವ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯಅಚ್ಚುತ ಮಣಿಯಾಣಿ ಆಲೆಟ್ಟಿ ಬಿಡುಗಡೆಗೊಳಿಸಿದರು. ದೇವಳದ ಅರ್ಚಕ ರಘುರಾಮ್ ಭಟ್, ಜನನಿ ಫ್ರೆಂಡ್ಸ್ ಕ್ಲಬ್ ಉಪಾಧ್ಯಕ್ಷ ನಿತಿನ್ ಗುಂಡ್ಯ, ಕಾರ್ಯದರ್ಶಿ ವಿಷ್ಣುಪ್ರಸಾದ್ ಗುಂಡ್ಯ, ರೂಪಾನಂದ ಗುಂಡ್ಯ, ಸುನಿಲ್ ಗುಂಡ್ಯ, ನಾರಾಯಣ ಕೆಳಗಿನ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.