ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆ ಮತ್ತು ಷರಾ ಪ್ರಕಾಶನದ ವತಿಯಿಂದ ನಡೆದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ

0

ಸುದ್ದಿ ಸಮೂಹ ಸಂಸ್ಥೆ, ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಭಾಷಣ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಆ.29 ರಂದು ನಡೆಯಿತು.


ಮುಖ್ಯೋಪಾಧ್ಯಾಯ ಸುರೇಶ್ ಪಿ.ಕೆ ಬಹುಮಾನ ವಿತರಿಸಿದರು. ಸಹ ಶಿಕ್ಷಕರಾದ ವೆಂಕಟ್ರಮಣ ಕೆ.ಕೆ, ಸಂದ್ಯಾರಾಣಿ, ಲೋಕನಾಥ ಗೌಡ, ರಾಜೇಶ್ ಕುಮಾರ್, ಚಂದ್ರು ಬಿ, ಜಯಶ್ರೀ,
ಸುದ್ದಿ ಪತ್ರಿಕೆಯ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ವರದಿಗಾರ ದಯಾನಂದ ಕೊರತ್ತೋಡಿ ಉಪಸ್ಥಿತರಿದ್ದರು. ವರದಿಗಾರ ಶಿವರಾಮ ಕಜೆಮೂಲೆ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವೆಂಕಟ್ರಮಣ ಕಾರ್ಯಕ್ರಮ ನಿರ್ವಹಿಸಿದರು.