ತೊಡಿಕಾನ ಗ್ರಾಮದ ಶೆಟ್ಯಡ್ಕದ ನಿವೃತ್ತ ಪೋಸ್ಟ್ ಮಾಸ್ತರ್ ದಿ. ವಿಶ್ವನಾಥ ಮೂಡನಕಜೆ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಸೆ.3ರಂದು ಪೆತ್ತಾಜೆ ಮನೆಯಲ್ಲಿ ಜರುಗಿತು.








ನಿವೃತ್ತ ಮುಖ್ಯೋಪಾಧ್ಯಾಯ ಚಿದಾನಂದ ಮಾಸ್ತರ್ ಗೂನಡ್ಕ ಅವರು ದಿ. ವಿಶ್ವನಾಥ ಮೂಡನಕಜೆ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ಮೃತರ ಪತ್ನಿ ವಿಮಲ, ಪುತ್ರ ಭಾನುಪ್ರಕಾಶ್, ಪುತ್ರಿಯರಾದ ಭಾರತಿ, ಅಶ್ವಿನಿ, ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು, ಊರವರು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.









