ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಯಾತ್ರಾರ್ಥಿಯ ಕರಿಮಣಿ ಸರ ಕಳ್ಳತನ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ವಾಪಾಸ್ ಹೋಗುವಾಗ ಬಸ್ ಹತ್ತುವ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಯಾತ್ರಾರ್ಥಿಯೊಬ್ಬರ ಕರಿಮಣಿ ಸರ ಕಳ್ಳತನವಾದ ಬಗ್ಗೆ ಸೆ.3 ರಂದು ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಕೊಡಗು ಜಿಲ್ಲೆಯ ಸೋಮವಾರ ಸಂತೆ ನಿವಾಸಿಯಾದ ಶ್ರೀಮತಿ ಲೀಲಾ ಎಂಬವರು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದಂತೆ ದೂರಿನಲ್ಲಿ , ಸೆ.3ರಂದು ಬೆಳಿಗ್ಗೆ ಲೀಲಾ ಅವರು ಅವರ ಊರಿನ ಇತರರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು, ಊರಿಗೆ ಹೋಗುವರೇ ಮಧ್ಯಾಹ್ನ ಹಾಸನ ಬೆಂಗಳೂರು ಬಸ್‌ಗೆ ಇತರರೊಂದಿಗೆ ಹತ್ತುವಾಗ ತುಂಬಾ ನೂಕು ನುಗ್ಗಲಿದ್ದು,ಲೀಲಾ ಅವರು ಬಸ್ಸು ಹತ್ತಿ ಸೀಟಿನಲ್ಲಿ ಕೂತು ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಅಂದಾಜು ರೂ. 87000 ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆಅ.ಕ್ರ ನಂಬ್ರ : 66/2023 ಕಲಂ:379 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.