ಎರಡೂ ಕಿಡ್ನಿಗಳ ವೈಫಲ್ಯದಿಂದ ಜೀವನ್ಮರಣ ಹೋರಾಟದಲ್ಲಿರುವ ಯುವಕ

0

ಮಗನಿಗೆ ತನ್ನ ಕಿಡ್ನಿ ಜೋಡಿಸಿ ಬದುಕಿಸಲು ತಂದೆಯ ನಿರ್ಧಾರ

ಕಿಡ್ನಿ ವರ್ಗಾವಣೆಗೆ ತಗುಲಲಿದೆ ಅಪಾರ ವೆಚ್ಚ: ಸಹೃದಯರ ಸಹಾಯಹಸ್ತಕ್ಕೆ ಮನವಿ

ಮಗನ ಜೀವ ಉಳಿಸಲು ತಂದೆಯೇ ತನ್ನ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಆದರೆ ಕಿಡ್ನಿ ಬದಲಾಯಿಸುವ ಕಾರ್ಯಕ್ಕೂ ಹಲವು ಲಕ್ಷ ವೆಚ್ಚ ತಗಲುತ್ತದೆ. ಅದಕ್ಕಾಗಿ ಈ ಕುಟುಂಬ ಸಹೃದಯರ ಸಹಾಯಕ್ಕೆ ಮೊರೆಯಿಡುತ್ತಿದೆ.

ಕೊಲ್ಲಮೊಗ್ರ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿರುವ ಕೊಲ್ಲಮೊಗ್ರು ಗ್ರಾಮದ ಶಿವಾಲ ನಿವಾಸಿ ಸಚಿತ್ ಶಿವಾಲ ಅವರ ಎರಡೂ ಕಿಡ್ನಿಗಳು ಪೈಲ್ಯೂರ್ ಆಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮಗನ ಪ್ರಾಣ ಉಳಿಸಿಕೊಳ್ಳಲು ಅನಿವಾರ್ಯ ವಾಗಿ ಮಗನಿಗೆ ತಂದೆಯ ಕಿಡ್ನಿ ಜೋಡಿಸಲು ತಯಾರಿ ನಡೆಸಲಾಗಿದೆ.

ಎರಡು ವರ್ಷಗಳ ಹಿಂದೆ ತಲೆ ನೋವು ಕಾಣಿಸಿಕೊಂಡಾಗ ಸಚಿತ್ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದರು. ಚಿಕಿತ್ಸೆ ಪಡೆದರೂ ತಲೆ ನೋವು ಕಡಿಮೆ ಆಗದಿದ್ದಾಗ ಹೆಚ್ಚುವರಿ ಪರೀಕ್ಷೆ ನಡೆಸಲಾಯಿತು. ಈ ವೇಳೆ ಎರಡೂ ಕಿಡ್ನಿ ಪೈಲ್ಯೂರ್ ಆಗಿರುವ ವಿಚಾರ ತಿಳಿಯಿತು. ಬಳಿಕ ಹಲವು ಭಾರಿ ಡಯಾಲಿಸಿಸ್ ನಡೆಸಲಾಗಿದೆ. IGA nephropathy ಎಂಬ chronic kidney disease ನಿಂದ ಬಳಲುತ್ತಿದ್ದ ಅವರ ಎರಡು ಕಿಡ್ನಿಗಳು ಸುಮಾರು 80% ದಷ್ಟು ನಿಷ್ಕ್ರಿಯಗೊಂಡಿರುವುದಾಗಿ ತಿಳಿದು ಬಂದಿದೆ.

ತಮಿಳುನಾಡಿನ ಕೊಯಿಕ್ಕೋಡ್ ಆಸ್ಟೆರ್ ಮಿಮ್ಸ್ ಆಸ್ಪತ್ರೆ ಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಡಯಾಲಿಸಿಸ್ ಪಡೆಯುತ್ತಿರುವ ಇವರಿಗೆ ತನ್ನ ಕಿಡ್ನಿಯೊಂದನ್ನು ನೀಡಲು ವೈದ್ಯರ ಸಲಹೆಯಂತೆ ತಂದೆ ಚಿನ್ನಪ್ಪರವರು ಮುಂದೆ ಬಂದಿದ್ದು, ಅತಿ ಶೀಘ್ರದಲ್ಲಿ ಕಿಡ್ನಿ ಟ್ರಾನ್ಸ್ ಸ್ಪರ್ ಮಾಡುವುದು ಅನಿವಾರ್ಯವಾಗಿದೆ.

ಇದಕ್ಕಾಗಿ ಸುಮಾರು 16 ಲಕ್ಷ ರೂ. ಅಂದಾಜು ಖರ್ಚು ತಗುಲಲಿದೆ. ಇಷ್ಟು ದೊಡ್ಡ ಮೊತ್ತ ಭರಿಸಲು ಈ ಕುಟುಂಬ ಶಕ್ತವಲ್ಲ.

ಹಾಗಾಗಿ ಸಹೃದಯರು ಬಹ
ದೊಡ್ಡ ಮನಸ್ಸು ಮಾಡಿ ಈ ಯುವಕನ ಜೀವ ಉಳಿಸಿಕೊಳ್ಳಲು ಕೈಜೋಡಿಸಿಕೊಳ್ಳಬೇಕಾಗಿದೆ.

ಇಲ್ಲಿ ನೀಡಲಾದ ಸ್ಕ್ಯಾನರ್ ಬಳಸಿ ಅಥವಾ ಅಕೌಂಟ್ ನಂಬರ್ ಬಳಸಿ ಸಹಾಯ ಹಸ್ತ ಚಾಚಬೇಕೆಂದು ಕೋರಲಾಗಿದೆ.
Name: SACHITH SHIVALA
BANK: BANK OF BARODA
ACC: 70640200001026
IFSC: BARB0VJKOMO
BRANCH: KOLLAMOGRU