ರೋಟರಿ ಕ್ಲಬ್ ಸುಳ್ಯ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ಪ್ರದಾನ

0


ಪ್ರತಿ ವರ್ಷದಂತೆ ಈ ವರ್ಷ ಸುಳ್ಯ ರೋಟರಿ ಕ್ಲಬ್ ವತಿಯಿಂದ ಆರು ಜನ ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು .

ಈ ಬಾರಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಶ್ರೀಮತಿ ತುಳಸಿ ಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ,ಚಂದ್ರಾವತಿ ಡಿ ಮುಖ್ಯ ಶಿಕ್ಷಕರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಂಪಾಜೆ, ಶ್ರೀಮತಿ ಸರೋಜಾ ಎಂ ಟಿ ಸಹ ಶಿಕ್ಷಕರು ರೋಟರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮತಿ ಸವಿತಾ ರಾಜೇಶ್ ರೋಟರಿ ಪೂರ್ವ ಪ್ರಾಥಮಿಕ ಶಾಲೆ , ಶ್ರೀಮತಿ ಉಷಾ ಕೆ ಸಹ ಶಿಕ್ಷಕರು ರೋಟರಿ ಪ್ರೌಢಶಾಲೆ ಸುಳ್ಯ ಇವರಿಗೆ ನೀಡಿ ಸೆ. 06 ರಂದು ಸಂಜೆ ಗಂಟೆ 5 30ಕ್ಕೇ ರೋಟರಿ ಸಮುದಾಯ ಭವನದಲ್ಲಿ ಗೌರವಿಸಲಾಗುವುದು ಎಂದು ರೋಟರಿ ಅಧ್ಯಕ್ಷ ಆನಂದ ಕಂಡಿಗ ಹಾಗೂ ಕಾರ್ಯದರ್ಶಿ ಕಸ್ತೂರಿ ಶಂಕರ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.